ಗೋಕರ್ಣ:
ಇಲ್ಲಿಯ ಸಮೀಪದ ದೇವಣದ ಮೈದಾನದಲ್ಲಿ ಬೇಟೆ ದೇವಣ, ತೊರ್ಕೆ ಇವರ ಆಶ್ರಯದಲ್ಲಿ ಸೋಮವಾರ ನಡೆದ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಕರಾಗಿ ನಿವೃತ್ತ ಡಿ.ಎಫ್.ಓ. ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ಮಾತನಾಡುತ್ತಾ ದೇವಣದಲ್ಲಿ ಈ ಹಿಂದೆಯೂ ಯಕ್ಷಗಾನ, ಗುಮಟೆ ಪಾಂಗ್, ಸುಗ್ಗಿ ಕುಣಿತ, ಭಜನೆ, ವಾಲಿಬಾಲ್ & ಕಬ್ಬಡ್ಡಿ ಯಂತಹ ಕ್ರೀಡೆಗಳು ನಡೆದಿದ್ದು ಇತ್ತೀಚೆಗೆ ಇವುಗಳು ತುಂಬ ವಿರಳವಾಗಿದೆ. ಯುವಕರು ಇಂತಹ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ಸಾಂಸ್ಕøತಿಕವಾಗಿ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಸಂಘಟಿಸುವುದು ಅನಿವಾರ್ಯ ಮತ್ತು ಅಗತ್ಯ ಎನ್ನುತ್ತಾ ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎನ್ನುತ್ತಾ ಹಿಂದುಳಿದ ಹಾಲಕ್ಕಿ ಸಮಾಜದ ಬಂಧುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಬೇಕಿದ್ದು ಈ ಕಾರ್ಯಕ್ಕೆ ಸಮಾಜದ ಮುಖಂಡರು ಸಹಕರಿಸಬೇಕು. ಆ ಮೂಲಕ ಅಭಿವೃದ್ಧಿಗೆ ಸಹಾಯಕವಾಗಬೇಕು ಎಂದು ಸಮಾಜಕ್ಕೆ ಕರೆ ನೀಡುತ್ತಾ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದ ವೇದಿಕೆಯಲ್ಲಿ ವೆಂಕಟ್ರಮಣ ಕವರಿ, ಲೋಕಪ್ಪ ಗೌಡ, ಅರುಣ ಕವರಿ ಮತ್ತು ಕೃಷ್ಣ ಗೌಡರವರು ಹಾಗೂ ಅನೇಕ ಕ್ರೀಡಾಭಿಮಾನಿಗಳು ಉಪಸ್ಥಿತಿತರಿದ್ದರು
-pushpahas bastikar
Leave a Comment