ಹೊನ್ನಾವರ:
ಸಿಲೆಕ್ಟ್ ಫೌಂಡೇಶನ್(ರಿ). ಶ್ರೀಕ್ಷೇತ್ರ ಬಂಗಾರಮಕ್ಕಿ. ಗೆರಸೊಪ್ಪಾ. ತಾ: ಹೊನ್ನಾವರ
ಪ್ರತಿ ವರ್ಷವೂ ಶ್ರೀಕ್ಷೇತ್ರ ಬಂಗಾರಮಕಿಯಲ್ಲ್ಕಿ ವಿಜೃಂಭಣೆಯಿಂದ ಆಚರಿಸಲಾಗುವ ಸಂಸ್ಕøತಿ ಕುಂಭ-ಮಲೆನಾಡ ಉತ್ಸವವು ಇದೇ ಬರುವ ಏಪ್ರಿಲ್ 05 ರಿಂದ ಏಪ್ರಿಲ್ 11ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮಲೆನಾಡ ಹಬ್ಬದ ಪ್ರಯುಕ್ತ ದಿನಾಂಕ 08-04-2017 ಶನಿವಾರದಂದು 17 ವರ್ಷದೊಳಗಿನ ಗಂಡುಮಕ್ಕಳ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ಕಾರಣದಿಂದ ಹೊನ್ನಾವರ ತಾಲೂಕನ್ನು ಪ್ರತಿನಿಧಿಸುವ 2 ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆಯು ದಿನಾಂಕ 05-03-2017 ರವಿವಾರದಂದು ನ್ಯೂ ಇಂಗ್ಲೀಷ್ ಸ್ಕೂಲ್ (ಆಂಗ್ಲ ಮಾಧ್ಯಮ) ಹೊನ್ನಾವರ ಹೈಸ್ಕೂಲಿನ ಮೈದಾನದಲ್ಲಿ ಯಶಸ್ವೀಯಾಗಿ ನಡೆಯಿತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಹೊನ್ನಾವರ ತಾಲೂಕಿನ ಬೇರೆ ಬೇರೆ ಹೈಸ್ಕೂಲು ಮತ್ತು ಕಾಲೇಜುಗಳಿಂದ ಭಾಗವಹಿಸಿದ್ದರು, ಅವರಲ್ಲಿ 28 ಮಂದಿಯನ್ನು ಹೊನ್ನಾವರ ತಂಡಗಳಿಗೆ ಆಯ್ಕೆ ಮಾಡಲಾಯಿತು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಂಯೋಜಕರಾದ ಶ್ರೀ ರಾಘವೇಂದ್ರ ಮೇಸ್ತ ಮತ್ತು ನಿರ್ಣಾಯಕರಾಗಿ ಶ್ರೀ ಬಾಬು ನಾಯ್ಕ, ಶ್ರೀ ಸಿತಾರಾಮ ನಾಯ್ಕ, ಶ್ರೀಮತಿ ಸಾಧನಾ ಬರ್ಗಿ ಆಗಮಿಸಿದ್ದರು. ಸಿಲೆಕ್ಟ್ ಫೌಂಡೇಶನ್ನ ಶ್ರೀ ಶಿವಾನಂದ (ಸದಾ) ಉಪಸ್ಥಿತರಿದ್ದು, ಈ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯಲ್ಲಿ ಸಹಕಾರ ನೀಡಿದವರಿಗೆ ಮತ್ತು ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
-gaju
Leave a Comment