ಗೋಕರ್ಣ :
ಇಲ್ಲಿನ ಕುಡ್ಲೆ ಕಡಲ ತೀರಕ್ಕೆ ಬಂದರೆ ವಿದೇಶೀಯರು ವಿದೇಶೀಯರಿಗಾಗಿಯೇ ಮಾರಾಟ ಮಾಡಿ ಸ್ವದೇಶಿ ವಿದೇಶೀ ಜನ ಖರೀದಿಸುವ ಚಿಕ್ಕ ಫುಟ್ ಪಾಥ್ ಬೀಚ್ ಅಂಗಡಿಗಳು ಒಮ್ಮೆ ನಿಮ್ಮನ್ನು ಆಕರ್ಶಿಸುತ್ತವೆ. ತೆಂಗಿನ ಕರಟದಿಂದ ಮಾಡಿದ ಕರಕುಷಲತೆ ಸಾಮಾನು, ಕಪ್ಪೆಚಿಪ್ಪಿನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶೀಯ ತಿಂಡಿ ತಿನಿಸುಗಳು, ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳ ಸುಂದರ ಮಾಟಗಳು ಹಾಗು ವೈವಿದ್ಯ ಮ್ಯೂಸಿಕಲ್ ಸಾಮಾನುಗಳು, ತಿಂಡಿಗಳು ಮಾರಾಟಕ್ಕೆ ಹಾಗು ನೋಡಲು ಲಬ್ಯವಾಗುತ್ತಿದೆ. ಕೆಲವೊಮ್ಮೆ ಇಲ್ಲಿಯೇ ವಿವಿಧ ಡಾನ್ಸ್ ಧಮಾಕಾಗಳು ಪದರ್ಶನ ಆಗುತ್ತಿರುತ್ತವೆ. ಕ್ಲಿಷ್ಟಕರ ಯೋಗ ಪ್ರದರ್ಶನ ಸರ್ಕಸ್ಗಳು ಆಗಾಗ ಇದ್ದು ಜತೆಗೆ ಪುಟ್ಟಪುಟ್ಟ ವಿದೇಶೀ ಮಕ್ಕಳ ಅಂದ ಚಂದಗಳು ಕಾಣಲು ಸಿಗುತ್ತಿದೆ. ಇಲ್ಲಿ ಅನೇಕರು ವಾದ್ಯ ತರಂಗ ಗಿಟಾರ್,ತಬಲಾ, ಜಲತರಂಗ ತಬಲಾ ಅನೇಕ ಸಂಗೀತ ಮಾಧೂರ್ಯವನ್ನೂ ಕೇಳುವ ಅವಕಾಷಗಳೂ ತಮಗೆ ದೊರೆಯುತ್ತಿರುತ್ತವೆ ಗೋಕರ್ಣ ಬೀಚ್ ನಲ್ಲಿ ಇನ್ನೊಂದು ತಿಂಗಳು ಮಾತ್ರ ವಿದೇಶೀ ಹಂಗಾಮಿನ ದಿನಗಳಿದ್ದು ನಂತರದ ದಿನಗಳಲ್ಲಿ ವಿದೇಶೀಯರ ಆಗಮನ ಕೊಂಚ ಕಡಿಮೆಯಾಗುತ್ತಾ ಮೇ ನಲ್ಲಿ ಪೂರ್ಣ ವಿರಾಮವಾಗುತ್ತವೆ. ಬಹುತೇಕ ಎಲ್ಲ ವಿದೇಶೀಯರು ಅವರದೇ ಆದ ಸ್ವತಂತ್ರ ಜೀವನದಲ್ಲಿರುತ್ತಾರೆ. ಜತೆಗೆ ಸ್ವಚ್ಚ ಪರಿಸರದ ಕಾಳಜಿ ಜತೆಗೆ ಶುದ್ದ ನಡತೆಯಲ್ಲಿ ಗೋಕರ್ಣದ ಬೀಚ್ಗಳಲ್ಲಿ ಓಡಾಡುತ್ತಿರುತ್ತಾರೆ. ಇಲ್ಲಿನ ವಿದೇಶೀಯರ ಬಗ್ಗೆ ನಾವು ಅದ್ಯಯನಿಸಿ ಇವರ ಏಕಾಗ್ರತೆಯ ಬದುಕನ್ನು ನಾವು ರೂಢಿಸಿಕೊಂಡು ನಾವು ಇವರಿಂದ ಕಲಿಯಬೇಕಾದದ್ದೂ ಬಹಳಷ್ಟಿದೆ.
–pushpahas bastikar
Leave a Comment