ಗೋಕರ್ಣ :
ಇಲ್ಲಿಯ ಶ್ರೀ ಹರಿಹರೇಶ್ವರ ವೇದ ವಿದ್ಯಾಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಐದು ದಿನಗಳ ಶಾಕಲ ಋಕ್ ಸಂಹಿತಾ ಯಾಗ 60 ಕ್ಕೂ ಹೆಚ್ಚಿನ ಋತ್ವಿಜರ ಸಮ್ಮುಖದಲ್ಲಿ ನಡೆಯಿತು. ಜತೆಗೆ ಸಾಮ, ಯಜುರ್, ಋಗ್, ಅಥರ್ವಣ ವೇದ ಪಾರಾಯಣ ಹಾಗೂ ಗಣೇಶ ಹವನ ನಡೆಯಿತು. ಸಂಹಿತಾ ಯಾಗದ ಅಗ್ನಿ ಮುಖದೊಂದಿಗೆ 10,552 ಶ್ಲೋಕ ಮಂತ್ರಗಳನ್ನು ವೇದ ಪಾಠಶಾಲೆಯ ವಿದ್ಯಾಥಿಗಳೇ ಹೇಳಿದ್ದು ವಿಶೇಷವಾಗಿತ್ತು.
ಪಾಠ ಶಾಲೆಯ ಪ್ರಾಂಶುಪಾಲ ವೇ. ಉದಯ ಮೈಯ್ಯರ್ ದಂಪತಿಗಳ ಪ್ರಮುಖತ್ವ ಹಾಗೂ ವೇ. ಕೃಷ್ಣ ಜೋಗಭಟ್, ವೇ. ಬಾಲಚಂದ್ರ ದೀಕ್ಷಿತ್, ವೇ.ದತ್ತಾತ್ರಯ ಗೋಪಿಯವರ ಘನ ಅದ್ವೈರ್ಯದಲ್ಲಿ ನಡೆದ ಸಂಹಿತಾಯಾಗದಲ್ಲಿ ಸುಹಾಸಿನಿಯರು, ದುರ್ಗೆಯರು ವೈದಿಕವೃಂದ ಒಟ್ಟಾಗಿದ್ದ ವಿಜೃಂಬಣೆ ಅಲ್ಲಿತ್ತು.
ಜಗತ್ತಿನ ಪ್ರಕ್ಷುಬ್ದತೆ ನಿವಾರಣೆ, ವಿಶ್ವ ಶಾಂತಿ, ನಿಸರ್ಗ ಶಾಂತಿ, ವನ ಶಾಂತಿ, ಪ್ರಾಣಿ ಪಕ್ಷಿ ಜಲಚರ ವೃದ್ದಿಯ ಜತೆಗೆ ಶಾಂತಿ ನೆಮ್ಮದಿಯ ಸಂತೃಪ್ತಿ ಸಮೃದ್ದತೆಯ ವಾತಾವರಣ ನಿರ್ಮಾಣವಾಗಲಿ ಎಂಬ ಉದಾತ್ತತೆಯ ವೇದ ಉದ್ಘೋಷದ ಪಠಣ, ವಾಚನ, ಮನನ, ಚಿಂತನದೊಂದಿಗೆ ಪಾಠ ಶಾಲೆಯ ವೇದಾಶ್ರಮದಲ್ಲಿ ಸಂಹಿತಾಯಾಗ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
-pushpahas bastikar
Leave a Comment