ಹೊನ್ನಾವರ:
ಹೊನ್ನಾವರ ತಾಲೂಕಿನ ಬೇರೊಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಿನಿ ಲಾರಿಯನ್ನು ಹೊನ್ನಾವರ ಪೊಲೀಸರು ದಾಳಿ ನಡೆಸಿ 1 ಲಕ್ಷ ರೂ.ಮೌಲ್ಯದ ಮರಳನ್ನು ಹಾಗೂ ಸಾಗಾಟಕ್ಕೆ ಬಳಸಲಾದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಖರ್ವಾ ನಾಥಗೇರಿಯ ನಿವಾಸಿ, ಲಾರಿ ಚಾಲಕ ಸಂತೋಷ ಮಾದೇವ ನಾಯ್ಕ ಹಾಗೂ ಗುಂಡಬಾಳ ಚಿಕ್ಕನಕೋಡ ನಿವಾಸಿ, ಕ್ಲೀನರ್ ಮಾರುತಿ ಹನುಮಂತ ನಾಯ್ಕ ಬಂಧಿತ ಆರೋಪಿಗಳು. ಇವರು ಸರ್ಕಾರದ ಹೊಸ ಮರಳು ನೀತಿಯನ್ನು ಉಲ್ಲಂಘಿಸಿ, ಸರ್ಕಾರದ ಆದಾಯವನ್ನು ಕಟ್ಟದೆ ಅಕ್ರಮವಾಗಿ 407 ಮಿನಿ ಲಾರಿಯಲ್ಲಿ ಬೇರೊಳ್ಳಿಯ ಕ್ರಾಸ್ ಸಮೀಪ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಹೊನ್ನಾವರದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-gaju
Leave a Comment