ಹೊನ್ನಾವರ:
ಹೊನ್ನಾವರ ತಾಲೂಕಿನ ಮಾವಿನಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಲಲಿತಾ ಟಿ ಭಟ್ ಅವರಿಗೆ ರಾಜ್ಯದ ಉತ್ತಮ ಶಿಕ್ಷಕರಿಗೆ ನೀಡುವ `ಶಿಕ್ಷಣ ಸೇವಾರತ್ನ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
`ಶಿಕ್ಷಣ ಜ್ಞಾನ’ ಪತ್ರಿಕೆ ಹಾಗೂ ರೋಟರಿ ಕ್ಲಬ್ ಕೋಲಾರ ಸಂಯುಕ್ತವಾಗಿ ಇತ್ತೀಚೆಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮೂಲತ ಹೊನ್ನಾವರ ತಾಲೂಕಿನ ಕರ್ಕಿಯವರಾದ ಲಲಿತಾ ಭಟ್ಟ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅನುಪಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರಶಸ್ತಿನೀಡಲಾಗಿದೆ. 30 ವರ್ಷಗಳಿಂದ ಆನೆಗದ್ದೆ, ಮಾವಿನಹೊಳೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ, ಶಾಲೆಯ ಕಷ್ಟವನ್ನು ಅರಿತ ತಾಯ ಕರುಳಿನ ವಿದ್ಯಾರ್ಥಿಯಾಗಿ, ತಾನು ಓದಿದ ಕರ್ಕಿಯ ಚೆನ್ನಕೇಶವ ಹೈಸ್ಕೂಲ್ ಸಹಿತ ಹಲವು ಶಾಲೆಗಳಿಗೆ ಸ್ವಯಂಸ್ಫೂರ್ತಿಯಿಂದ ತಾನು ಕಲಿತ ಮತ್ತು ಕಲಿಸುವ ಶಾಲೆಗಳ ಒಳಿತಿಗಾಗಿ ಸಾವಿರಾರು ರೂಪಾಯಿ ದೇಣಿಗೆ ನೀಡಿ ತಮ್ಮ ಶೈಕ್ಷಣಿಕ ಪ್ರೇಮವನ್ನು ಮೆರೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
-gaju
Leave a Comment