ಗೋಕರ್ಣ :
ಮೂರು ಕಂಠ ಹೊಂದಿದ 5 ಅಡಿ ನಾಗರಹಾವೊಂದು ಮುಸ್ಸಂಜೆಯ ಹೊತ್ತಿನಲ್ಲಿ ಇಲ್ಲಿನ ಕಾರಂತಹಕ್ಲ ಹೋಬಳಿಯ ಶ್ರೀನಿವಾಸ ಗೌಡರ ಮನೆಯ ಹಿತ್ತಲಿನ ಬಿದಿರ ಹಿಂಡಿನಲ್ಲಿ ಕಾಣಿಸಿಕೊಂಡಿದೆ. ತಕ್ಷಣ “ಸ್ನೇಕ್ ಮಿತ್ರ” ಪಾಂಡು ಮಾಂದ್ರೇಕರರಿಗೆ ದೂರವಾಣಿ ತಲುಪಿ ದೌಡಾಯಿಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಆದರೆ ಹಾವು ಬಿಚ್ಚಿದ ಹೆಡೆ ಮುಚ್ಚಲಾರದೇ ತನ್ನ ಬಾಯನ್ನೂ ಮುಚ್ಚಲಾಗದೇ ಒದ್ದಾಡುತ್ತಿರುವ ದೃಷ್ಯ ಕಣ್ಣಿಗೆ ರಾಚುತ್ತಿದೆ. ಮುಸ್ಸಂಜೆಯ ತುಸು ಕತ್ತಲೆಯ ಸಮಯ ಹಾವಿನ ಬಾಯಿಯ ನೋವಿನ ಅರಿವು ತಿಳಿಯದಾಗಿದೆ.
ಹಾವನ್ನು ಬೆಳಿಗ್ಗೆಯತನಕ ಡಬ್ಬದಲ್ಲಿ ತುಂಬಿ ತುಸು ನೀರನ್ನು ಹಾಕಿ ಆರೋಗ್ಯಕ್ಕೆ ಹಾನಿಯಾಗದಂತೆ ಕಾಪಾಡಲಾಗಿದೆ. ಬೆಳಿಗ್ಗೆ ನಾಗರ ಹಾಗೆಯೇ ತೆರೆದ ಬಾಯಿ ಹೆಡೆಯೊಂದಿಗೆ ಜೀವಂತವಾಗಿದೆ. ತಕ್ಷಣ ತುಂಡು ಬಟ್ಟೆಯ ಸಹಾಯದಿಂದ ಹೆಡೆಯ ಭಾಗವನ್ನು ಹಿಡಿದು ನಾಗರ ಬಾಯಿಯೊಳಗೆ ಇಣುಕಿದರೆ ತಂತಿಯಂತಹ ದಾರ ಗೋಚರಿಸಿದೆ.
ತಕ್ಷಣ ನಾಗರವನ್ನು ಸಮೀಪದ ಪಶು ಚಿಕಿತ್ಸಾಲಯದ ವೈದ್ಯರನ್ನು ಸಂಪರ್ಕಿಸಿ ಹಾವಿನ ಬಾಲ ಹಾಗು ಹೆಡೆಯ ಭಾಗವನ್ನು ಕೆಲಸಮಯ ಅದುಮಿ ಹಿಡಿದು ಬಾಯಿ ತೆರೆಸಿ ವೈದ್ಯರು ನಾಗರನ ಬಾಯಿಗೆ ಸುತ್ತಿಕೊಂಡ ಪ್ಲಾಸ್ಟಿಕ್ ಟೆಂಗಿಸ್ ಹಾಗು ತಂತಿ ಸೂಜಿ ಚುಚ್ಚಿದ ತುಣುಕನ್ನು ಕತ್ತರಿಸಿದ್ದು ರೋಮಾಂಚನೀಯ ದೃಷ್ಯವಾಗಿ ಕಾಣಿಸಿಕೊಂಡಿದೆ.
ಹಾವು ತಡೆಯಲಾರದ ನೋವಿನಿಂದ ಒದ್ದಾಡುತ್ತಿರುವಾಗ ಹಾವಿಗೆ ಯಾವದೇ ಜೀವ ಹಾನಿಯಾಗದಂತೆ ತಂತಿ ಹಾಗು ಪ್ಲಾಸ್ಟಿಕ್ ದಾರದ ತುಂಡನ್ನು ತೆಗೆದು ಶ್ಲಾಘನೀಯ ಕಾರ್ಯ ವೆಸಗಿದವರು ಡಾ. ವಿ.ಎಂ. ಹೆಗಡೆ ಆಗಿದ್ದು ಹೊಗಳಿಕೆಗೆ ಪಾತ್ರವಾಗಿದ್ದಾರೆ. ಹಾವಿನ ಬಾಯಿಯ ಘಾಯಕ್ಕೆ ಎಂಟಿಬೈಯೋಟಿಕ್ಸ್ ಆಯೋಡಿನ್ ಹಾಗು ಔಷಧಗಳೊಂದಿಗೆ ಶುಶ್ರೂಷೆ ಮಾಡಿ ಹಾವನ್ನು ಜೀವಾಪಾಯದಿಂದ ರಕ್ಷಿಸಿದ್ದಾರೆ. ಕೆಲ ಸಮಯದಲ್ಲಿಯೇ ನಾಗರ ಹಾವು ತನ್ನ ಸಹಜ ಇರುವಿಕೆಯ ಬುಸ್ ಬುಸ್ ಎನ್ನುವ ಶಬ್ದ ಪ್ರಾರಂಬಿಸಿದೆ.
ಜಾನುವಾರು ವೈದ್ಯಾಧಿಕಾರಿ ಡಾ. ವಿ.ಎಂ.ಹೆಗಡೆ ಹೇಳುವಂತೆ “ ನಾಗರಹಾವು ಅತೀ ಸೂಕ್ಶ್ಮ ಜೀವಿ ಆಗಿದ್ದು ಚುರುಕುತನವಿರುವ ಹಾವುಗಳಿಗೆ ಈತೆರನಾಗುವದು ಅಪರೂಪಕ್ಕೆ ಹಾವಿಗೆ ಈ ಸಂಕಷ್ಟ ಎದುರಾಗಿದೆ. ಹಾವಿಗೂ ಸಹ ಇತರ ಪ್ರಾಣಿಗಳಿಗೆ ನೀಡುವ ಔಷದೋಪಚಾರವೇ ಆಗಿದೆ. ನನ್ನದಿದು ಪ್ರಥಮ ಕಾರ್ಯದ ಶುಷ್ರೂ± ನಿಮ್ಮ ಸಹಕಾರ ಇಲ್ಲಿ ಸಾಕಸ್ಟಿದೆ” ಎಂದರು. ಸ್ನೇಕ್ ಮಿತ್ರ ಪಾಂಡು ಹೇಳುವಂತೆ “ ಸಾವಿರಕ್ಕೂ ಹೆಚ್ಚಿನ ನಾಗರ ಹಿಡಿದ ನಾನು ಪ್ರಥಮ ಬಾರಿ ಈ ರೀತಿ ಆಗಿದ್ದನ್ನು ನೋಡಿದೆ” ಪಾಪಾ ಉಗ್ರವಾದರೂ ಬಡಜೀವಿ” ಎಂದು ಚಿಕಿತ್ಸೆಗೆ ಸಹಕರಿಸಿದೆ. ಕಾಡಿಗೆ ಬಿಟ್ಟು ಬರುತ್ತೇನೆ. ಎಂದರು.
ಪಶು ಆಸ್ಪತ್ರೆಯ ಸಿಬ್ಬಂದಿ ಬೀರಪ್ಪಾ ಗೌಡ, ಹಾಗು ಪತ್ರಿಕಾ ವರದಿಗಾರರಾದ ನಾಗರಾಜ ದೇವತೆ, ಗಜಾನನ ನಾಯಕ, ವೆಂಕಟೇಶ ಗೌಡರ ಪಾತ್ರ ನಾಗರ ಹಾವಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಪಾತ್ರ ವಹಿಸಿತ್ತು. “ನಾಗರ ಹಾವಿಗೂ ಸಾಯುವ ಭಯ ನಿವಾರಿಸುವಲ್ಲಿ ಮಹತ್ತರ ಕಾಯಕ” ಎಂದು ಈ ದೃಷ್ಯಾವಳಿ ನೋಡಲು ಆಗಮಿಸಿದ ನೂರಾರು ಜನರ ಬಾಯಲ್ಲಿ ಕೇಳಿ ಬಂದಿತ್ತು. ನಾಗರ ಹಾವು ಮತ್ತೆ ತನ್ನ ಕಾಯಕದೊಂದಿಗೆ ಬುಸ್ ಬುಸ್ ಎನ್ನುತ್ತಾ ಕಾಡು ಸೇರಿ ಸಂದಿಯೊಳಗೆ ಅವಿತುಕೊಂಡಿತು.
✍? *ಪುಷ್ಪಹಾಸ ಬಸ್ತಿಕರ
Leave a Comment