ಹೊನ್ನಾವರ:
ಸಾಲಕೋಡದಲ್ಲಿ ತೊಳಸಾಣಿ, ಕೆರೆಕೋಣ, ಹೊಯ್ನೀರು, ಕೆರೆಮನೆ ಕಚ್ಚರಿಕೆ ಹಾಗೂ ಮುಂತಾದ ಭಾಗಗಳಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಡೆಯುತ್ತಿದೆ. ಕೆರೆಮನೆಕಚ್ಚರಿಕೆಯಲ್ಲಿ ಶಾಲೆಯ ಸಮೀಪ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೆರೆಕೋಣದಲ್ಲಿ ಪ್ರತಿಮನೆಯಲ್ಲಿ ಕಳ್ಳಭಟಿ ಮಾರಾಟ ಮಾಡಲಾಗುತ್ತಿದೆ. ಸಾಲಕೋಡದಲ್ಲಿ ಅನಿಲ ನಾಯ್ಕ, ಕೃಷ್ಣ ನಾಯ್ಕ ಮತ್ತಿತರರು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ತನಿಖೆಯ ನೆಪವೊಡ್ಡಿ ಬಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಅಂಗಡಿಗಳಲ್ಲಿ ಡೈರಿ ಇಟ್ಟು ಸಹಿ ಮಾಡಿ ಹೋಗುತ್ತಾರೆ. ಅಕ್ರಮ ಸಾರಾಯಿ ಮಾರಾಟ ದಂಧೆಯಲ್ಲಿ ತೊಡಗಿಕೊಂಡವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳುವಿಫಲರಾಗಿದ್ದಾರೆ”
– ವಿಶ್ವನಾಥ ಶೆಟ್ಟಿ ಸಾಲಕೋಡ
-gaju.
Leave a Comment