ಯಲ್ಲಾಪುರ:
ಮೇರಾ ಭಾರತ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕ್ರಾಂತಿತ್ರಯರಿಗೆ ನಮನ ಎಂಬ ಕಾರ್ಯಕ್ರಮದಲ್ಲಿ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದಲ್ಲಿ ಸೈನಿಕರ ಶ್ರೇಯೋಭಿವೃದ್ಧಿ ಮತ್ತು ಭಾರತವು ಭ್ರಷ್ಟಾಚಾರ ಮುಕ್ತ ಆಗಲಿ ಎಂಬ ಸಂಕಲ್ಪದೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಾತಾ ಸಂಸ್ಕ್ರತ ಕಾಲೇಜಿನ ಅಧ್ಯಾಪಕರಾದ ಮಂಜುನಾಥ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಮೂಡಿಸಲು ಮೇರಾ ಭಾರತ ಪ್ರತಿಷ್ಠಾನ ಅವಶ್ಯಕವಾಗಲಿದೆ ಎಂದರು. ಮತ್ತು ಇನ್ನೋರ್ವ ಅಧ್ಯಾಪಕರಾದ ರಾಜೇಶ ಶಾಸ್ತ್ರಿ ಅವರು ಮಾತನಾಡಿ ಮೇರಾ ಭಾರತ ಪ್ರತಿಷ್ಠಾನದ ಸೈನಿಕರ ನಿಧಿ ಸಂಗ್ರಹದಂತ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ ಎಂದರು. ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತ ಅನಂತ ಭಟ್ ಇವರು ಸೈನಿಕರ ನಿಧಿ ಸಂಗ್ರಹದ ಬಗ್ಗೆ ವಿವರಿಸಿದರು. ಇನ್ನೋರ್ವ ಕಾರ್ಯಕರ್ತರಾದ ಚಿದಂಬರ ಹೆಗಡೆ ಲಕ್ಕಿಸವಲು ಇವರು ಸಂಘಟನೆ ನಡೆದು ಬಂದ ಹಾದಿ ಮತ್ತು ಕ್ರಾಂತಿ ತ್ರಯರಿಗೆ ನಮನ ಕಾರ್ಯಕ್ರಮದ ವಿಶೇಷತೆ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಮೇರಾ ಭಾರತ ಪ್ರತಿಷ್ಠಾನದ ಕಾರ್ಯಕರ್ತರು ಮತ್ತು ಶ್ರೀ ಮಾತಾ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸೈನಿಕರ ನಿಧಿಗೆ ತಮ್ಮ ಧನ ಸಹಾಯವನ್ನು ಮಾಡಿದರು. ಇದೇ ರೀತಿ ಮೇರಾ ಭಾರತ ಪ್ರತಿಷ್ಠಾನದ ಈ ಕಾರ್ಯಕ್ರಮ ಸಿರಸಿ, ಹಾಲ್ಕಣಿ ಮುಂತಾದ ಸ್ಥಳಗಳಲ್ಲಿ ನಡೆಯಿತು.
Leave a Comment