ಹೊನ್ನಾವರ:
ಗ್ರಾಹಕನ ನಿತ್ಯದ ಬದುಕಿನಲ್ಲಿ ಶೋಷಣೆ ಆಗಬಾರದೆಂಬ ಆಶಯದಲ್ಲಿ ಗ್ರಾಹಕ ಕಾಯಿದೆ ಜಾರಿಗೆ ತರಲಾಗಿದ್ದು ಪ್ರತಿಯೊಬ್ಬ ನಾಗರಿಕನು ಈ ಕಾಯಿದೆಯ ಅರಿವು ಹೊಂದಿರಬೇಕು ಎಂದು ಹೊನ್ನಾವರ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ್ ಅಭಿಪ್ರಾಯಪಟ್ಟರು.
ಅವರು ತಾಲೂಕಾ ಕಾನೂನು ಸಮಿತಿ, ವಕೀಲರ ಸಂಘ ಹೊನ್ನಾವರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗ ಸಂಯುಕ್ತವಾಗಿ ಏರ್ಪಡಿಸಿದ ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದರು.
ಅತಿಥಿಯಾಗಿ ಆಗಮಿಸಿದ ಪ್ರಧಾನ ಸಿವಿಲ್ ಜಜ್ಜ ನ್ಯಾಯಾಧೀಶೆ ಎಂ.ಎಸ್. ಹರಿಣಿ ಮಾತನಾಡಿ ಕಾಯಿದೆಯ ಸದ್ಭಳಕೆಯನ್ನು ಮಾಡಿಕೊಳ್ಳಲು ವಿದ್ಯಾರ್ಥಿಗಳು ಮುಂದಾದಾಗ ಮನೆ ಮನೆಗಳಲ್ಲಿ, ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಧ್ಯ ಎಂದÀು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಕೀಲ ಎಂ. ಎನ್ ಸುಬ್ರಹ್ಮಣ್ಯ ಗ್ರಾಹಕರ ಕಾಯಿದೆ ಕುರಿತು ಉಪನ್ಯಾಸ ನೀಡಿದರು.
ಸರಕಾರಿ ಅಭಿಯೋಜಕ ಕೆ. ಬದರೀನಾಥ ನಾಯರಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಸುಮಂಗಲಾ ಬಿ. ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜು ಉಪನ್ಯಾಸಕ ಪ್ರೊ. ಜಿ.ಪಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಕೀಲರಾದ ಮಾಧವ ಜಾಲಿಸತ್ಗಿ, ವಿ.ಎಂ. ಭಂಡಾರಿ, ಶರಾವತಿ ಹೆಗಡೆ ಗ್ರಾಹಕರ ಕಾಯ್ದೆ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಶಯಗಳಿಗೆ ಮಾಹಿತಿ ನೀಡಿದರು.
-gaju
Leave a Comment