ಹೊನ್ನಾವರ:
ಕರ್ನಾಟಕ ವಿದ್ಯುತ್ ಮಂಡಳಿ ಪಿಂಚಣಿದಾರರ ಸಂಘದ ಹೊನ್ನಾವರ ವಿಭಾಗೀಯ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ಕ.ವಿ.ಮಂಡಳಿ ಗಣೇಶೋತ್ಸವ ಕಟ್ಟಡದಲ್ಲಿ ಆಯೋಜಿಸಲಾಗುವುದು.
ಸಮಾರಂಭದಲ್ಲಿ ಬೆಂಗಳೂರು, ಹುಬ್ಬಳ್ಳಿಯ ರಾಜ್ಯ ಸಂಘದ ಪದಾಧಿಕಾರಿಗಳು, ಹೊನ್ನಾವರ, ಕುಮಟಾ, ಭಟ್ಕಳ ತಾಲೂಕಿನಲ್ಲಿರುವ ಕ.ವಿ.ಮಂಡಳಿ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಪಾಲ್ಗೊಳ್ಳುವರು ಎಂದು ಸಮೀತಿಯ ಅಧ್ಯಕ್ಷ ಅಬ್ದುಲ್ ಸಮದ್, ಕಾರ್ಯದರ್ಶಿ ಡಿ.ಡಿ.ಮಡಿವಾಳ ಮತ್ತು ಖಜಾಂಚಿ ಮಹಮ್ಮದ ಗೌಸ್ ತಿಳಿಸಿದ್ದಾರೆ.
-gaju
Leave a Comment