

ಹೊನ್ನಾವರ:
ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ, ತಾ: ಹೊನ್ನಾವರ
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17
ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲಿನ ವಾರ್ಷಿಕೋತ್ಸವವು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ದಿನಾಂಕ 28-03-2017 ರಂದು ಮದ್ಯಾಹ್ನ 2-30 ಕ್ಕೆ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ವೇದಘೋಷಗಳ ಜೊತೆಗೆ ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಶಾಲೆಯ ಪ್ರಾಂಶುಪಾಲರಾದ ಶ್ರೀ ಜಿ. ಟಿ. ಹೆಗಡೆಯವರು ಸರ್ವರನ್ನು ಸ್ವಾಗತಿಸಿ ಶಾಲೆಯ ಶೈಕ್ಷಣಿಕ ವಾರ್ಷಿಕ ವರದಿಯನ್ನು ವಾಚಿಸಿದರು.
ಶಾಲೆಯ ಸಾಂಸ್ಕøತಿಕ ಮತ್ತು ವಾರ್ಷಿಕ ಕ್ರೀಡಾಕೂಟz ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿ ತಝನೂರ ಮುಕ್ತೇಸರ ಮತ್ತು ವಿದ್ಯಾರ್ಥಿನಿ ರಮ್ಯಾ ಆರ್ ಭಟ್ ಇವರಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಟ್ಟದ ಚಿಂತನ ಪರೀಕ್ಷೆಯಲ್ಲಿ ಸ್ಥಾನ ಪಡೆದಿದ್ದಕ್ಕೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಶಾಲೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಎಸ್. ಜೆ. ಕೈರನ್ ಅವರು ಶಾಲೆಯ ಶೈಕ್ಷಣಿಕ ಪ್ರಗತಿಯ ಕುರಿತು ಹಿತನುಡಿಗಳನ್ನಾಡಿದರು. ಪಾಲಕರ ಸಂಘದ ಅಧ್ಯಕ್ಷರಾದ ಶ್ರೀ ನರೇಂದ್ರ ನಾಯಕ ಅವರು ಪಾಲಕರಾದ ತಾವು ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಾ ಜೊತೆಯಾಗಿರುತ್ತೇವೆ ಎಂದು ನುಡಿದರು.
ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ನಮ್ಮ ಶಾಲೆ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಮಕ್ಕಳ ಬೌದ್ಧಿಕ ಪ್ರಗತಿಗೆ ಪರೀಕ್ಷೆಗಳ ಅಂಕಗಳು ನಿದರ್ಶನವಾದರೆ, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆ ತರಲು ವಾರ್ಷಿಕ ಸ್ನೇಹ ಸಮ್ಮೇಳನ ನಿದರ್ಶನವಾಗುತ್ತದೆ ಎಂದು ಆಶೀರ್ವಚನಗಳನ್ನು ನುಡಿದು ಶಾಲೆಯ ಒಳಿತಿಗೆ ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು, ಪಿರಾಮಿಡ್ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಶಿಕ್ಷಕಿ ಗೌರಿ ಹೆಗಡೆ ಮತ್ತು ಶ್ರೀ ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶಕುಂತಲಾ ಸಾರಂಗ ಅವರು ವಂದಿಸಿದರು.
-gaju
Leave a Comment