ಹೊನ್ನಾವರ:
ಹೊನ್ನಾವರ ಲಾಯನ್ಸ್ ವಿದ್ಯಾಭವನದಲ್ಲಿ ನಡೆದ ಜಿಲ್ಲಾ ಗವರ್ನರ್ ವಿಜಿಟ್ ಸಮಾರಂಭದಲ್ಲಿ ಹೆಲ್ತ ಪಾಯಿಂಟ ಜಿಮ್ ಸಂಚಾಲಕರಾದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ ಮಾಡಲಾಯಿತು. ರಾಷ್ಟ್ರಮಟ್ಟದ ದೇಹದಾಡ್ಯ ಸ್ಪರ್ಧೆ – 2017 ರಲ್ಲಿ ಪ್ರಥಮ ಸ್ಥಾನ ದೊರಕಿದ್ದು ಚಿನ್ನದ ಪದಕರೊಂದಿಗೆ ಈ ಪ್ರಶಸ್ತಿಯನ್ನು ಅವರು ಇತ್ತೀಚೆಗೆ ಪೂನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಡೆದಿದ್ದಾರೆ.
ಕಳೆದ 10 ವರ್ಷಗಳಿಂದ ಹೆಲ್ತ ಪಾಯಿಂಟ್ ಜಿಮ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನ ಯುವಕರಿಗೆ ದೇಹದಾಡ್ಯ ಕುರಿತು, ಆರೋಗ್ಯದ ಕುರಿತು, ವಿಶೇಷ ಎಚ್ಚರವನ್ನು ಮೂಡಿಸುತ್ತಿದ್ದಾರೆ. ಹೆಲ್ತ್ ಪಾಯಿಂಟ್ ಜಿಮ್ನ ವಿದ್ಯಾರ್ಥಿಗಳು ನೂರಾರು ಜನ ಕ್ರೀಡೆಯಲ್ಲಿ ಯುನಿರ್ವಸಿಟಿ ಬ್ಲೂ ಆಗಿದ್ದಾರೆ. ಅನೇಕರು ಪಿ.ಎಸ್.ಐ ಕುಡ ಆಗಿದ್ದಾರೆ. ಪೋಲಿಸ್ ಇಲಾಖೆಯಲ್ಲಿ ಸೈನ್ಯದ ಉನ್ನತ ಅಧಿಕಾರಿಗಳಾಗಿದ್ದಾರೆ. ಮತ್ತೆ ಅನೇಕರು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುವ ದೇಹದಾಡ್ಯ ಪಟುಗಳಾಗಿದ್ದಾರೆ. ಹಾಳಾದ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಎಲ್ಲ ವಯಸ್ಸಿನವರು ಅವರ ಜಿಮ್ಗೆ ಬರುತ್ತಾರೆ. ಅವರ ಸಾಧನೆಗಾಗಿ ಅವರ ಅಭಿಮಾನಿಗಳು ಹಾರ್ದಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಲಾಯನ್ಸ್ ಜಿಲ್ಲಾ ಗವರ್ನರ್ ಎಂ.ಜಿ.ಎಫ್ ಲಾಯನ್ ವಿ.ಆರ್. ಹಿರೇಗೌಡರ ಅವರ ಲಾಯನ್ಸ್ ಕ್ಲಬ್ ಬೇಟಿಯ ಕಾರ್ಯಕ್ರಮದಲ್ಲಿ ಅನಿಲ ನಾಯ್ಕರನ್ನು ಸನ್ಮಾನ ಪತ್ರದೊಂದಿಗೆ ಸನ್ಮಾಸಿಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಶೇಖರ ನಾಯ್ಕ ವಹಿಸಿಕೊಂಡಿದ್ದರು.
ಲಾ.ಡಿ.ಡಿ.ಮಡಿವಾಳ
Leave a Comment