ಹೊನ್ನಾವರ:
ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್,
ಶ್ರೀಕ್ಷೇತ್ರ ಬಂಗಾರಮಕ್ಕಿ, ಪೋ| ಗೇರಸೊಪ್ಪಾ, ತಾ| ಹೊನ್ನಾವರ (ಉ.ಕ.)
ಸಂಸ್ಕøತಿ ಕುಂಭ ಮಲೆನಾಡ ಉತ್ಸವ – 2017
ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಇದೇ ಬರುವ ಏಪ್ರೀಲ್ 04 ರಿಂದ 11 ರವರೆಗೆ ಅಂದರೆ ಶ್ರೀ ರಾಮನವಮಿಯಿಂದ ಹನುಮ ಜಯಂತಿಯವರೆಗೆ ಶ್ರೀನಿವಾಸ ಕಲ್ಯಾಣೋತ್ಸವ, ಶರಾವತಿ ಕುಂಭ, ಸಂಸ್ಕøತಿ ಕುಂಭ ಮಲೆನಾಡ ಉತ್ಸವ-2017 ಹಾಗೂ ಶ್ರೀ ವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಬ್ರಹ್ಮ ರಥೋತ್ಸವ ಮತ್ತು ವನವಾಸಿ ಶ್ರೀ ಸೀತಾರಾಮ ಲಕ್ಷ್ಮಣ ದೇವರ ವರ್ಧಂತಿ ಉತ್ಸವ ಜರುಗಲಿದೆ.
ದಿನಾಂಕ 04-04-2017 ಮಂಗಳವಾರ ಸಂಜೆ 5:00 ಗಂಟೆಗೆ ಶ್ರೀ ವೀರಾಂಜನೇಯ ಸಭಾಭವನ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀವಾರಿ ಫೌಂಡೇಶನ್ (ರಿ) ಸಂಸ್ಥೆಯ ವ್ಯವಸ್ಥಾಪಕರಾದ ಡಾ|| ಎಸ್. ಎನ್. ಮೋಹನರವರ ಉಸ್ತುವಾರಿಯಲ್ಲಿ ದಾಸ ಸಾಹಿತ್ಯ ಪದ್ಧತಿಯಲ್ಲಿ ಶ್ರೀ ರಾಮನವಮಿಯ ಅಂಗವಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 05-04-2017, ಬುಧವಾರ ಬೆಳಿಗ್ಗೆ 5:20ರಿಂದ ಶರಾವತಿ ಕುಂಭ ಪ್ರಾರಂಭವಾಗಿ 08-04-2017 ರಂದು ಬೆಳಿಗ್ಗೆ 5:20ರ ತನಕ ನಡೆಯಲಿದ್ದು, ತ್ರಿಕಾಲ ಪೂಜೆ ಹಾಗೂ ಹೋಮ ಹವನಾದಿಗಳು ಶರಾವತಿ ನದಿಯ ತಟದಲ್ಲಿ ನಡೆಯಲಿವೆ. ದಿನಾಂಕ 5-04-2017 ಬುಧವಾರ ಮಧ್ಯಾಹ್ನ 4:00 ಗಂಟೆಗೆ ಸಂಸ್ಕøತಿ ಕುಂಭ ಮಲೆನಾಡ ಉತ್ಸವ– 2017 ನ್ನು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಮಂಕಾಳು ವೈದ್ಯ, ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ ಹಾಗೂ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರು, ಶ್ರೀ ಅಣ್ಣಯ್ಯ ನಾಯ್ಕ ತಾಲೂಕಾ ಪಂಚಾಯತ ಅಧ್ಯಕ್ಷರು ಹೊನ್ನಾವರ ಮತ್ತು ಶ್ರೀಮತಿ ಅನ್ನಪೂರ್ಣಾ ಶಾಸ್ತ್ರೀ, ಅಧ್ಯಕ್ಷರು ನಗರಬಸ್ತಿಕೇರಿ ಗ್ರಾವiಪಂಚಾಯತ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಸಂಸ್ಕøತಿ ಕುಂಭ ಮಲೆನಾಡ ಉತ್ಸವ 2017ರ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರಕಲಿದೆ.
ಜಾನಪz ಸಂಗಮವಾದ ಈ ಸಂಸ್ಕøತಿ ಕುಂಭ ಮಲೆನಾಡ ಉತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹಿತ ಸಂಗೀತ, ನೃತ್ಯ, ಜಾನಪದ ಗೀತೆ ಗಾಯನ, ನರ್ತನ, ನಾಟಕ, ಯಕ್ಷಗಾನ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೂರೆಗೊಳ್ಳಲಿವೆ. ವಿಶೇಷವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಈ ಸಂದರ್ಭದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ 08-04-2017 ರಂದು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಂತರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ದಿನಾಂಕ 09-04-2017 ರವಿವಾರದÀಂದು ಬಿಗ್ ಬಾಸ್ ಖ್ಯಾತಿಯ ಶ್ರೀ ರವಿ ಮೂರೂರು ಹಾಗೂ ತಂಡದವರಿಂದ ವಿಶೇಷ ಸಂಗೀತ ಸಂಜೆ ಮತ್ತು 10-04-2017 ಡಾ| ಸುಮನ್ ಹಾಗೂ ಶ್ರೀ ನಟರಾಜ ಗೋಕ್ಟೆ, ಕೊಪ್ಪ ದಂಪತಿಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ದಿನಾಂಕ 11-04-2017 ಮಂಗಳವಾರದಂದು ಬೆಳ್ಳಿತೆರೆ ಹಾಗೂ ಕಿರುತೆರೆ ಕಲಾವಿದರಾದ ಲಯಕೋಕಿಲ, ಮೈಸೂರು ಮಂಜುಳ, ರತ್ನಮಾಲ, ಜೂನಿಯರ್ ಮಾಲಾಶ್ರೀ ಮತ್ತು ‘ಈ ಸಂಜೆ’ ಸಿನೆಮಾ ಖ್ಯಾತಿಯ ಸಂಗೀತ ನಿರ್ದೇಶಕರಾದ ಶ್ರೀ ಶಿವು ಇವರೆಲ್ಲರ ಕೂಡುವಿಕೆಯಿಂದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರದಿಂದ “ಮುದ್ದಣ್ಣನ ಹಾಸ್ಯ” ಎಂಬ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರತಿಬಾರಿಯಂತೆ ಈ ವರ್ಷದ “ಶ್ರೀ ವೀರಾಂಜನೇಯ ಜಾನಪದಶ್ರೀ” ಪ್ರಶಸ್ತಿಯನ್ನು ಜಾನಪದ ವಿಭಾಗದಲ್ಲಿ ಶಿರಸಿಯ ಶ್ರೀಯುತ ವೆಂಕಣ್ಣ ಜಾಲಿಮನೆ, ಸಾಹಿತ್ಯ ವಿಭಾಗದಲ್ಲಿ ಶ್ರೀ ವಿಷ್ಣು ಜೋಶಿ, ಕುಮಟಾ ಹಾಗೂ ಆಯುರ್ವೇದ ವಿಭಾಗದಲ್ಲಿ ಶ್ರೀ ವೆಂಕಟ್ರಮಣ ದೈತೋಟ, ಇವರಿಗೆ ಅವರ ಸಾಧನೆ ಗುರುತಿಸಿ ಗೌರವಿಸಲಾಗುತ್ತಿದೆ. ಹಾಗೂ “ಶ್ರೀ ವೀರಾಂಜನೇಯ ಸೃಜನಶ್ರೀ” ಪ್ರಶಸ್ತಿಯನ್ನು ಶ್ರೀ ಕೆ.ಪಿ. ಶಂಕರ ಸೋಮಯಾಜಿ, ಚಿಟ್ಪಾಡಿ ಇವರಿಗೆ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ದಿನಾಂಕ 10-04-2017 ಸೋಮವಾರ ಶ್ರೀ ವೀರಾಂಜನೇಯ ದೇವರ ಪುಷ್ಪ ರಥೊತ್ಸವ ಮತ್ತು 11-04-2017ರ ಬೆಳಿಗ್ಗೆ 10:30ರ ಮಿಥುನ ಲU್ಪ್ನದ ಶುಭಮೂಹೂರ್ತದಲ್ಲಿ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.
ಈ ಉತ್ಸವದ ಅಂಗವಾಗಿ ನಿರಂತರ ಏಳು ದಿನಗಳ ಕಾಲ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣಾ ಹಾಗೂ ಅನೇಕ ಉಚಿತ ಆರೋಗ್ಯ ತಪಾಸಣಾ ಶಿಬಿgಗಳನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
Leave a Comment