ಹೊನ್ನಾವರ :
ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಬಹಳಷ್ಟು ಹುದ್ದೆಗಳು ಖಾಲಿ ಇದೆ. ಇದರಿಂದಾಗಿ ಪಟ್ಟಣ ಪಂಚಾಯತ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ. ತ್ಯಾಜ್ಯ ವಿಲೇವಾರಿ ಬಗ್ಗೆ ಭಾರಿ ಹೋರಾಟವೇ ನಡೆದಿದೆ. ಪಟ್ಟಣದ ಸ್ವಚ್ಛತಾ ಕಾರ್ಯಗಳು ವಿಳಂಬವಾಗುತ್ತಿವೆ. ಈ ಕುರಿತು ಪಟ್ಟಣ ಪಂಚಾಯತ ಸದಸ್ಯರು ಈಗಾಗಲೇ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿರುತ್ತಾರೆ. ಆದರೂ ಯಾವುದೇ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತ ಸದಸ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆಗ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕಿ ಯವರು ಹೊನ್ನಾವರದಲ್ಲಿ ಉಪಸ್ಥಿಥರಿದ್ದರೂ ಪ್ರತಿಭಟನೆ ನಡೆಯುತ್ತಿದ್ದ ದಾರಿಯಿಂದಲೇ ಹಾದು ಹೋದರೂ ಪ್ರತಿಭಟಣೆ ನಿರತರ ಬೇಡಿಕೆ ಬಗ್ಗೆ ವಿಚಾರಿಸದೇ ಹೋಗಿರುತ್ತಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಬೇಕಾಗಿದ್ದ ಶಾಸಕರೇ ಈ ರೀತಿ ನಿರ್ಲಕ್ಷವಹಿಸಿದ್ದು ಎಷ್ಟು ಸರಿ ? ಇದು ಹೊನ್ನಾವರದ ಬಗ್ಗೆ ಅವರ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಂತಿದೆ
ಸಂಸ್ಥಾಪಕ ಅಧ್ಯಕ್ಷರು
( ಉದಯರಾಜ ಮೇಸ್ತ)
Leave a Comment