ಹೊನ್ನಾವರ :
ಸಿಲೆಕ್ಟ್ ಪೌಂಡೇಷನ್ ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ಕ್ಕೆ, ಪದ್ಮಶ್ರೀ ಪುರಸ್ಕøತ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದ ಉದ್ಘಾಟಕರಾದ ರಾಮಚಂದ್ರ ಹೆಗಡೆ ಚಿಟ್ಟಾಣಿ ಮಾತನಾಡಿ ‘ಜಗತ್ತಿಗೆ ಬೇಕಾಗುವುದು ಬೆಳಕು, ಆ ಬೆಳಕು ಶ್ರೀ ಕ್ಷೇತ್ರ ಬಂಗಾರಮಕ್ಕಿಯಾಗಿದೆ’.
“ ಬೆಳಗಲಿ ಮನೆ, ಬೆಳಗಲಿ ಮನ, ಬೆಳಗಲಿ ಸೀಮೆ, ಬೆಳಗಲಿ ಸಮಾಜ” ಇದಕ್ಕೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯೇ ನಿದರ್ಶನವಾಗಿದೆ, ಎಂಬ ವಾಸ್ತವಿಕ ನುಡಿಯನ್ನು ನುಡಿದರು.
ನಂತರ “ ಶ್ರೀ ವೀರಾಂಜನೇಯ ಜಾನಪದಶ್ರೀ” ಪ್ರಶಸ್ತಿ ಸನ್ಮಾನಿತರಾದ ವೆಂಕಟರಮಣ ದೈತೋಟಮಾತನಾಡಿ ಮೂಲಿಕಾ ತಜ್ಞರವರು “ತಾನೊಬ್ಬ ಬರಹಗಾರ, ಆದರೆ ಮಾತುಗಾರನಲ್ಲ” ಎಂಬ ಇಂಗಿತದೊಂದಿಗೆ ಗಿಡಮೂಲಿಕೆ ಸಸ್ಯಗಳ ರಕ್ಷಣೆಯ ಮತ್ತು ಇಂದಿನ ವಿಷಪೂರಿತ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.
ಆಯುರ್ವೇದ ವೈದ್ಯಾಧಿಕಾರಿಗಳಾದ ಡಾ|| ಕೆ. ವಿ. ಪತಂಜಲಿ ಮಾತನಾಡಿ, “ ಕೇವಲ ಪುಸ್ತಕದಿಂದ ತಿಳಿದದ್ದು ತಲೆಯ ಮೇಲೆ ಹೂ ಇಟ್ಟುಕೊಂಡಂತೆ, ಆದರೆ ಪ್ರಾಪಂಚಿಕ ಜ್ಞಾನ ಅತೀ ಅಮೂಲ್ಯವಾಗಿದೆ.” ಕಾಡುತ್ತಿದೆ, ಗಿಡಮೂಲಕೆ ಸಸ್ಯಗಳನ್ನು ಬೆಳೆಸಿ ಮನುಕುಲವನ್ನು ಉಳಿಸಿಎಂದರು.
ಎಂ. ಕೆ. ಪಟ್ಟಣ್ ಶೆಟ್ಟಿ, ಮಾಜಿ ಶಾಸಕರು ಬಾದಾಮಿ, ಮಾತನಾಡಿ “ಕಲೆ ಎಂಬುದು ಎಲ್ಲಾ ಕಡೆಗಳಲ್ಲಿ ಪ್ರಸಾರವಾಗಬೇಕು, ಪ್ರಚಾರವಾಗಬೇಕು, ಮಲೆನಾಡು ಪ್ರದೇಶ ಅನೇಕ ಕಲೆಗಳ ತವರೂರಾಗಿದ್ದು, ಆ ಕಲೆಯನ್ನು ಉಳಿಸಲು ಶ್ರೀ ಕ್ಷೇತ್ರ ಬಂಗಾರಮಕ್ಕಿ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು. ನಂತರ ಉಪನ್ಯಾಸಕರಾದ ಶ್ರೀ ಸಿದ್ದು ಯಾಪಲಪರವಿಯವರು ಮಾತನಾಡಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ನಡುವಿನ ಸಂಬಂಧ ಉತ್ತಮವಾಗಿರಲಿ ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷರರಾದ ಶ್ರೀಮತಿ ಅನ್ನಪೂರ್ಣ ಶಾಸ್ತ್ರಿಯವರು ಮಾತನಾಡಿ ನಶಿಸಿ ಹೋಗುತ್ತಿರುವ ಕಲೆಯನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಪ್ರತಿ ವರ್ಷ ಮಲೆನಾಡ ಉತ್ಸವವನ್ನು ಆಚರಿಸುವ ಮೂಲಕ ಉಳಿಸಿ ಬೆಳೆಸುತ್ತಿದ್ದಾರೆಎಂದುರು.
ಕೊನೆಯಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರು ನೆರೆದಿರುವ ಸರ್ವ ಭಕ್ತವೃಂದವನ್ನು ಉದ್ಧೇಶಿಸಿ “ ಕುಂಭ” ಎಂಬ ಪದದ ಅರ್ಥ ತಿಳಿಸಿದರು.
“ ಕುಂಭ ಎಂಬುದು ನಮ್ಮ ಸಂಸ್ಕøತಿ, ಸಂಸ್ಕಾರ ಉಳಿಸಿ ಬೆಳೆಸುವುದಾಗಿದೆ, ಇದು ಉಳಿದಿದ್ದು ಪ್ರಕೃತಿ ಮತ್ತು ನದಿ ಮೂಲಗಳಿಂದ, ಆದರೆ ಮಾನವ ಪ್ರಕೃತಿ ವಿರುದ್ಧ ಸಂಚಾರ ಮಾಡುತ್ತಿರುವುದರಿಂದ ನೀರಿನ ಅಭಾವ ಉಂಟಾಗಿದೆ. ಶರಾವತಿ ನದಿಯು ಉಳಿದುಕೊಂಡಿದ್ದು ಕುಂಭಗಳಿಂದ, ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾಡುಗಳ ರಕ್ಷಣೆ ಆದರೆ ಮಲೆನಾಡು ರಕ್ಷಣೆ ಆದಂತೆ, ಪಶ್ಚಿಮ ಘಟ್ಟಗಳ ರಕ್ಷಣೆ ಆದರೆ ಎಲ್ಲಾ ದೇಶಗಳ ರಕ್ಷಣೆ ಆಗುತ್ತದೆ. ಒಟ್ಟಿನಲ್ಲಿ ಆಚಾರ, ವಿಚಾರ, ಸಂಸ್ಕøತಿ ಉಳಿಸುವುದೇ ಈ ಮಲೆನಾಡ ಉತ್ಸವದ ಉದ್ದೇಶ ಮಾಗಿದೆ. ಕಲೆ ಕಳೆದುಕೊಂಡರೆ ಸಂಸ್ಕøತಿಗೆ ದಕ್ಕೆ ಉಂಡಾಗುತ್ತದೆ. ಯಕ್ಷಗಾನ ಎಂಬುದು ಒಂದು ಪವಿತ್ರ ಕಲೆಯಾಗಿದೆ ಇದನ್ನು ಕಲಾವಿದರು ಲಯ, ತಾಳ, ರಾಗ ಅರಿತುಕೊಂಡು ಉಳಿಸಬೇಕಾಗಿದೆ ಹಾಗೂ ಕಲೆಗೆ ಗೌರವಿಸಬೇಕಾಗಿದೆ. ರಾಮನ ರಾಮಾಯಣಕ್ಕೆ ಕಾರಣೀಕರ್ತನಾದ ಶ್ರೀ ಆಂಜನೇಯ ಎಲ್ಲಾ ಯುವಜನತೆಗೆ ಕಲೆಗಳನ್ನು ಉಳಿಸುವ ಹಾಗೆ ಮಾಡಲಿ ಎಂಬ ಆಶಿರ್ವಚನ ನೀಡಿದರು.
ಸಭೆಗೆ ಆಗಮಿಸಿರುವ ಗಣ್ಯಾಧಿಗಣ್ಯರನ್ನು ಗಣಪತಿ ಹೆಗಡೆ ಸಿಲೆಕ್ಟ್ ಪೌಂಡೆಷನ್(ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಇವರು ವಂದಿಸಿದರು
Leave a Comment