ಹೊನ್ನಾವರ:
ಸೇವೆಯಲ್ಲಿ ಸೇರಿದ ನಂತರ ಪ್ರತಿಯೊಬ್ಬರು ಒಂದು ದಿವಸ ನಿವೃತ್ತಿ ಹೊಂದಲೇ ಬೇಕು. ನಿವೃತ್ತಿ ಜೀವನವನ್ನು ಉತ್ತಮ ಕಾರ್ಯ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ಪಿಂಚಣಿದಾರರ ಕುಂದುಕೊರತೆಗಳಿಗೆ ರಾಜ್ಯ ಸಂಘದ ಕೋಶಾಧಿಕಾರಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಬಂದ ಕ.ವಿ. ಮಂಡಳಿ ಪಿಂಚಣಿದಾರರ ರಾಜ್ಯ ಸಂಘ ಕೋಶಾಧಿಕಾರಿ ಶ್ರೀ ಎಂ.ಎಂ. ನಾಡಗೇರಿ ತಿಳಿಸಿದರು.
ಹೊನ್ನಾವರದ ವಿಭಾಗೀಯ ರಿಜನಲ್ ಸಮೀತಿಯ ಉದ್ಘಾಟಣಾ ಸಮಾರಂಭ ಕೆ.ಇ.ಬಿ. ಗಣೇಶೋತ್ಸವ ಸಮೀತಿಯ ಕಟ್ಟಡದಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷರು ಹುಬ್ಬಳ್ಳಿ ಶ್ರೀ ನಾಗಪ್ಪ ಟಿ ಹಾವೇರಿ ಇವರು ಸಂಘಟನೆ ಅತೀ ಅವಶ್ಯ ಸಂಘದಿಂದ ಸಿಗುವ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಅಬ್ದುಲ್ ಸಮ್ಮದ ಬಂದ ಎಲ್ಲರಿಗೂ ಶುಭಕೋರಿ ಸದಸ್ಯರ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು. ಶ್ರಿ ವೆಂಕಟ ಸುಬ್ಬಯ್ಯ ಸಂಘಟನಾ ಕಾರ್ಯದರ್ಶಿ ಹುಬ್ಬಳ್ಳಿ ಶ್ರೀ ಚಿಕ್ಕನರಸಿಂಹಪ್ಪ ಸ.ಕಾ.ನಿ. ಹೊನ್ನಾವರ ಶ್ರೀ ಗಿರಿಧರ ಹರಿಕಾಂತ ಸಿ.ಇ.ಸಿ. ಸದಸ್ಯರು ಕಾರವಾರ ಶಂಕರ ಗೌಡ ಶಾಖಾಧಿಕಾರಿ ಕೆ.ಆರ್. ಅರವಾಲ ಸಿ.ಇ.ಸಿ. ಸದಸ್ಯರು ಧಾರವಾಡ ಒ.ಉ. ಕೊಟುರ ಧಾರವಾಡ ಮಾತನಾಡಿದರು. ವೇದಿಕೆಯಲ್ಲಿ ಡಿಸಿಡಬ್ಲು ಫರ್ನಾಂಡಿಸ್, ಜುದೋ ಫರ್ನಾಂಡಿಸ್ ಇದ್ದರು.
ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಘದ ಕಾರ್ಯದರ್ಶಿ ಶ್ರೀ ಡಿ.ಡಿ. ಮಡಿವಾಳ ಮಾಡಿದರು. ನಿರ್ವಹಣೆ ಶ್ರೀ ಅಂತೋನ್ ಫರ್ನಾಂಡೀಸ್ ಮಾಡಿದರು.
Leave a Comment