ಹೊನ್ನಾವರ:
ದಿನಾಂಕ: 8-04-2017 ಶನಿವಾರ ಸಾಯಂಕಾಲ 6.30 ಗಂಟೆಗೆ ವಿದ್ಯಾರ್ಥಿ ವೇದಿಕೆ ಸಂಗೀತ ಕಾರ್ಯಕ್ರಮ ಕು. ಶ್ರೀನಿಧಿ ಹೆಗಡೆ ಶಿರಸಿ ಇವರಿಂದ ನೆರವೇರಿತು. ನಂತರ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಹೇಮಾಪುರವೆಂದು ಪ್ರಖ್ಯಾತಿ ಹೊಂದಿದ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಚತುರ್ಥ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ವ್ಯವಸ್ಥಾಪಕ ನಿರ್ದೇಶಕರು, ಸೇಪ್ ಸ್ಟಾರ್ ಗ್ರುಪ್ ಹೊನ್ನಾವರದ, ಶ್ರೀ ಜಿ.ಜಿ. ಶಂಕರರವರು “ಅಂದಕಾರದ ಕತ್ತಲೆಯನ್ನು ಹೋಗಲಾಡಿಸುª,À ಜ್ಞಾನದ ದೀವಿಗೆಯನ್ನು ಬೆಳಗಿಸುವ ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಶ್ರೀ ಅಜಿತ್ ನಾಡಿಗ್ ರವರು ಪ್ರಾಸ್ತವಿಕ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸರ್ವರನ್ನು ಸ್ವಾಗತಿಸಿದರು. ಇಂದಿನ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಕಲ್ಪನಾ ಹೊನ್ನಾವರ ಇವರು ನಿರ್ವಹಿಸಿದರು.
ನಂತರ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಜಿ. ಜಿ. ಶಂಕರರವರು ಮಾತನಾಡಿ ” ಮಲೆನಾಡ ಉತ್ಸವಕ್ಕೆ ಬಂದಿರುವ ತಾವುಗಳು ಪುಣ್ಯವಂತರು, ಇಂದಿನ ಪ್ರಸ್ತುತ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ಇಂತಹ ಉತ್ತಮ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರಿಂದ ನಿಮ್ಮ ಜೀವನ ಪಾವನವಾಗಿದೆ.” ಶ್ರೀ ಮಾರುತಿ ಗುರೂಜಿಯವರ ಭಗೀರಥ ಪ್ರಯತ್ನದಿಂದ ಶ್ರೀ ಕ್ಷೇತ್ರ ಬಂಗಾರಮಕ್ಕಿಯು ಎಲ್ಲಾ ರಂಗಗಳಲ್ಲಿ ಅತ್ಯಂತ ಅಮೋಘ ಸೇವೆಯನ್ನು ಮಾಡುತ್ತಿದೆ. ನೊಂದವರಿಗೆ ನೆಮ್ಮದಿಯನ್ನು ನೀಡುತ್ತಿದೆ. ಎಂದು ನುಡಿದರು.
ತದನಂತರ ಹೊನ್ನಾವರದ ಉದ್ಯಮಿಗಳಾದ ಶ್ರೀ ಸತ್ಯ ಜಾವಗಲ್ ಇವರು ಮಾತನಾಡಿ “ ಎಲ್ಲಾ ಧಾನಗಳಲ್ಲಿ ಶೇಷ್ಠವಾದ ಧಾನ ಅನ್ನ ಧಾನ” ಅಂತಹ ಅನ್ನಧಾನವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಹಾಗೆ ಶ್ರೀ ಕ್ಷೇತ್ರವು ವಿದ್ಯಾ ಧಾನದಲ್ಲಿ ಕೂಡಾ ಉಚ್ರಾಯ ಸ್ಥಿತಿಯಲ್ಲಿದೆ. ಹಾಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಶ್ರೀ ಕ್ಷೇತ್ರ ಮಾಡುತ್ತಾ ಬಂದಿದೆ. ಸೂರ್ಯ –ಚಂದ್ರ ಇರುವ ವರೆಗೂ ಶ್ರೀ ಕ್ಷೇತ್ರ ಇಂತಹ ಮಲೆನಾಡು ಉತ್ಸವವನ್ನು ಆಚರಿಸಲಿ ಅದಕ್ಕೆ ನಾವು ಕೂಡ ಬೆಂಬಲಿಗರು ಎಂದು ಹೇಳಿದರು.
ನಂತರ ಹೊನ್ನಾವರದ ಭಾವನಾ ಟಿ.ವಿ.ಯ ಅಧ್ಯಕ್ಷರಾದ ಶ್ರೀ ಭವಾನಿ ಶಂಕರ ರವರು ಮಾತನಾಡಿ ಶ್ರೀ ಕ್ಷೇತ್ರವು ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನು ನೀಡುತ್ತಿದೆ. ಶ್ರೀ ಕ್ಷೇತ್ರದ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಓದುತ್ತಿದ್ದ ಒಬ್ಬ ವಿದ್ಯಾಥಿಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದದ್ದು ಶ್ರೀ ಕ್ಷೇತ್ರಕ್ಕೆ ಒಳ್ಳೆಯ ಹೆಸರನ್ನು ನೀಡಿದೆ ಎಂದು ಹೇಳಿದರು.
ನಂತರ ಶ್ರೀ ಕೃಷ್ಣ ಮೂರ್ತಿ ಹೆಬ್ಬಾರ ರವರು ಮಾತನಾಡಿ “ ಒಳ್ಳೆಯದನ್ನು ಪ್ರೋತ್ಸಾಹಿಸಿದ ಭಾವ ಜೀವಿಗಳು ಗುರೂಜಿಯವರು ಎಂಬುದನ್ನು ಚೀನಾದ ಒಂದು ಕಥೆಯನ್ನು ನಿದರ್ಶನವಾಗಿ ನೀಡುವುದರ ಮೂಲಕ ಶ್ರೀ ಪರಮ ಪೂಜ್ಯ ಮಾರುತಿ ಗುರೂಜಿಯವರನ್ನು ಮರದ ಬೇರಿಗೆ ಹೋಲಿಸಿದ್ದಾರೆ, ಅಂದರೆ ಬೇರು ಹೇಗೆ ಒಂದು ಮರಕ್ಕೆ ಆಧಾರವೋ ಹಾಗೆ ಮಾರುತಿ ಗುರೂಜಿಯವರು ನಮಗೆಲ್ಲ ಆಧಾರವಾಗಿದ್ದಾರೆ.
“ ಗುಡಿಗೆ ಹೋಗುವ ದಾರಿಯಲ್ಲಿ
ಹೆಜ್ಜೆಗೊಂದು ಹೂವಿದೆ,
ಪುಣ್ಯ ಪಯಣ ಸಾರುವಲ್ಲಿ
ನಿಮಿಷಕ್ಕೊಂದು ನೋವಿದೆ.” ಎಂದು ಶ್ರೀ ಮಾರುತಿ ಗುರುಜಿಯವರ ಈ ಬದುಕು ಒಬ್ಬ ತಾಯಿಯ ಪ್ರಸವವೇದನೆಯ ನೋವಿದ್ದ ಹಾಗೆ, ಶ್ರೀ ಮಾರುತಿ ಗುರುಜಿಯವರು ತಾಯಿ ಇದ್ದ ಹಾಗೆ ನಮ್ಮೆಲ್ಲರ ರಕ್ಷಕರಾಗಿದ್ದಾರೆ.
ಕೊನೆಯಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರು ನೆರೆದಿರುವ ಸರ್ವ ಭಕ್ತವೃಂದವನ್ನು ಉದ್ಧೇಶಿಸಿ “ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸೋಣ, ಸವಾಲುಗಳನ್ನು ಸುಲಭವಾಗಿ ಪರಿಹರಿಸೋಣ.” ಮಾಧ್ಯಮ ಎಂಬುದು ಒಂದು ಉತ್ತಮ ಗುರು ಇದ್ದ ಹಾಗೆ, ಗುರುಗಳಾದವರು ಹೇಗೆ ತನ್ನ ಶಿಷ್ಯರನ್ನು ಮುಂದಿನ ಉತ್ತಮ ನಾಗರಿಕನ್ನಾಗಿ ಮಾಡುವ ಹಾಗೆ ಸಮಾಜ ಎಂಬ ಮಗುವನ್ನು ಬೆಳೆಸುವುದು ಮಾಧ್ಯಮದ ಕರ್ತವ್ಯ. ಹಳೆಯ ಆಚಾರ – ವಿಚಾರ ಪದ್ಧತಿಗಳನ್ನು ಇಂದು ನಾವು ಮರೆಯುತ್ತಿದ್ದೇವೆ. ಉತ್ಸವವು ಸಮಾಜಕ್ಕೆ ಆದರ್ಶವಾಗಬೇಕ, ಏಕೀಕರಣಕ್ಕೆ ನಾಂದಿಯಾಗಬೇಕು, ಇಲ್ಲವಾದರೆ ಅದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಉತ್ಸವವು ಮೂಲ ತತ್ವ, ಸತ್ವವನ್ನು ಬಿಟ್ಟು ಹೋಗಬಾರದು ಎಂದು ಆಶೀರ್ವಚನ ನೀಡಿದರು.
ಸಭೆಗೆ ಆಗಮಿಸಿರುವ ಗಣ್ಯಾಧಿಗಣ್ಯರನ್ನು ಶ್ರೀ ಗಣಪತಿ ಹೆಗಡೆ ಇವರು ವಂಧನೆಯನ್ನ ಸಲ್ಲಿಸುವುದರೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅನುವು ಮಾಡಿ ಕೊಟ್ಟರು. ನಂತರ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
Leave a Comment