ಹೊನ್ನಾವರ :
ತಾಲೂಕಿನ ಕಾಸರಕೋಡ ಟೊಂಕದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಪರ್ಶಿಯನ್ ಬೋಟ್ ಸಮುದ್ರದ ಅಳಿವಿಗೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರೂ ಹಾನಿಯಾಗಿದೆ.
ಹೊನ್ನಾವರದ ತುಕಾರಾಮ ಮೇಸ್ತ ಎಂಬುವವರಿಗೆ ಸೇರಿದ ಬೋಟ್ ಅಳಿವಿಗೆ ಸಿಲುಕಿದೆ. ಬೋಟ್ನಲ್ಲಿದ್ದ 25 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಬೋಟಿಗೆ ಹಾನಿಯಾಗಿದೆ. ಸ್ಥಳಕ್ಕೆ ಕರಾವಳಿ ಕಾವಲುಪಡೆ ಹಾಗೂ ಹೊನ್ನಾವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment