ಹೊನ್ನಾವರ:
ಹೊನ್ನಾವರದ ಮೀನುಗಾರಿಕಾ ಪ್ರದೇಶದ ಅಳಿವೆಯಲ್ಲಿ ಹೂಳುತುಂಬಿದ ಪರಿಣಾಮ ಮೀನುಗಾರರು ಸಂಕಷ್ಟ ಪಡುವಂತಾಗಿದೆ.
ನಗರದ ಬಂದರು ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ವರ್ಷಕ್ಕೆ ನಾಲ್ಕೈದು ಮೀನುಗಾರಿಕಾ ಬೋಟ್ ಗಳು ದಡಕ್ಕೆ ಅಪ್ಪಳಿಸಿ ಹಾನಿಗಿಡಾಗುತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಹಿಂದೆ ಸ್ಥಳೀಯ ಮೀನುಗಾರರೊಬ್ಬರಿಗೆ ಸೇರಿದ ಬೋಟ್ ಒಂದು ಅಳಿವೆಯಲ್ಲಿ ತುಂಬಿದ್ದ ಹೂಳಿಗೆ ಸಿಕ್ಕಿ ಹಾನಿಗೊಳಗಾಗಿದ್ದು ಸುಮಾರು ಲಕ್ಷಾಂತರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬಂದರು ಪ್ರದೇಶದಲ್ಲಿ ತ್ವರಿತವಾಗಿ ಹೂಳೆತ್ತುವ ಅನಿವಾರ್ಯತೆ ಇದ್ದು ಸಂಬದ್ದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಈ ಕೂಡಲೇ ತಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಮಸ್ಯೆ ಬಗ್ಗೆ ಬಂದರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಂದರು ಪ್ರದೇಶದ ಸುತ್ತಮುತ್ತ ಸಾವಿರಾರು ಎಕರೆ ಬಂದರು ಇಲಾಖೆಗೆ ಸೇರಿದ ಜಾಗವಿದ್ದು ಅದನ್ನು ಸ್ಥಳಿಯರು ಅತಿಕ್ರಮಣ ಮಾಡಿದ್ದಾರೆ. ಅತಿಕ್ರಮಣ ತೆರವಿಗೆ ನೋಟಿಸ್ ನೀಡಲಾಗಿದೆ. ಅತಿಕ್ರಮಣ ಜಾಗವನ್ನು ವಶಪಡಿಸಿಕೊಂಡ ಬಳಿಕ ಬಂದರನ್ನು ಬೃಹತ್ ಪ್ರಮಾಣದಲ್ಲಿ ನವೀಕರಣ ಮಾಡಲಾಗುವದು ಎಂದು ಹೇಳಿದ್ದಾರೆ.

Leave a Comment