ಕುಮಟಾ:
ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ತನ್ನ ಒಂದು ಕಾಲನ್ನು ಕಳೆದುಕೊಂಡ ಬಡವಿದ್ಯಾರ್ಥಿ ಪ್ರದೀಪ್ ಪಟಗಾರ, ಮೊರಬಾ ಇವರಿಗೆ ಗ್ರಾಮ ಒಕ್ಕಲು ಯುವ ಬಳಗ- ಕುಮಟಾ ಇದರ ಸದಸ್ಯರು ಪ್ರದೀಪನ ಮನೆಗೆ ತೆರಳಿ ಪ್ರದೀಪನಿಗೆ ಧೈರ್ಯ ಹೇಳಿ ಯುವಬಳಗದ ಅಪಘಾತ ಪರಿಹಾರ ನಿಧಿಯಿಂದ 5000ರೂ ಹಾಗೂ ಯುವಬಳಗದ ಸಹಾಯವಾಣಿಗೆ ಓಗೊಟ್ಟು ಗ್ರಾಮ ಒಕ್ಕಲು ಸಮುದಾಯದ ದಾನಿಗಳು ನೀಡಿದ ಸಹಾಯ ಧನದ ಮೊತ್ತ 16000ರೂ ಸೇರಿಸಿ ಒಟ್ಟು 21000 ರೂಪಾಯಿಗಳನ್ನು ಇದೇ ಕಳೆದ ಸೋಮವಾರ, ದಿನಾಂಕ 10-04-2017ರಂದು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
Leave a Comment