ಅಂಕೋಲಾ :
ಇಲ್ಲಿಯ ಸಾಂಸ್ಕೃತಿಕ ಕಲಾ ವೇದಿಕೆಯ ಆಶ್ರಯದಲ್ಲಿ ಏಪ್ರೀಲ್ 14 ರಿಂದ 18 ರವರೆಗೆ ನಡೆಯುವ ಅಂಕೋಲಾ ಸಾಂಸ್ಕೃತಿಕ ಕಲಾಮೇಳದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಶಾಸಕ ಸತೀಶ ಸೈಲ್ ಪಟ್ಟಣದ ಕಾಮತ ಪ್ಲಸ್ ಹೊಟೇಲ್ ಸಭಾಭವನದಲ್ಲಿ ಬಿಡುಗಡೆ ಮಾಡಿದರು
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಸತೀಶ ಸೈಲ್, ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ವೈವಿಧ್ಯಮಯ ಕಲೆ , ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದೊಂದಿಗೆ ಇಲ್ಲಿಯ ಕನಸೆಗದ್ದೆಯಲ್ಲಿ ಅಂಕೋಲಾ ಸಾಂಸ್ಕೃತಿಕ ಕಲಾಮೇಳವನ್ನು ಆಯೋಜಿಸಲಾಗಿದೆ.
ಅಂಕೋಲಾ ಕಲೆ, ಸಂಸ್ಕೃತಿ, ಜನಪದದಲ್ಲಿ ತನ್ನದೇ ಆದ ಹೆಸರು ಪಡೆದ ಊರು. ಇಲ್ಲಿಯ ಅನೇಕ ಪ್ರತಿಭೆಗಳು ನಾಡು, ಹೊರನಾಡಿನಲ್ಲಿ ಹೆಸರು ಮಾಡಿವೆ. ಇಲ್ಲಿಯ ಜೊತೆಗೆ ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಪ್ರಯತ್ನ ಈ ಕಲಾಮೇಳದಲ್ಲಿ ಆಗಿದೆ. ಇದರ ಜೊತೆಗೆ ಮೂರು ದಿನ ಸಭಾ ಕಾಯಾಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ. ಅನೇಕ ಉತ್ತಮ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಕಲಾ ಕಾರ್ಯಕ್ರಮಗಳನ್ನೂ ಜೋಡಿಸಲಾಗಿದೆ. ವಸ್ತು ಪ್ರದರ್ಶನ, ಮಾರಾಟದ ಮೂಲಕ ಸ್ವಯಂ ಉದ್ಯೋಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ ಮನರಂಜನೆಗಾಗಿ ಅಮ್ಯೂಸ್ಮೆಂಟ ಕೂಡ ಇಲ್ಲಿ ಹಾಕಲಾಗಿದೆ .
ಇಂತಹ ಅಪರೂಪದ ಉತ್ಸವಕ್ಕೆ ಎಲ್ಲರ ಸಹಕಾರ ಅಗತ್ಯ. ಊರಿನ ಜನ ಐದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಈ ಪುಟ್ಟ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದರು.
ಕಲಾ ವೆದಿಕೆಯ ಅಧ್ಯಕ್ಷ ಗಂಗಾಧರ ಭೋವಿ ಮಾತನಾಡಿ ಕಳೆದ ವರ್ಷ ಜಿಲ್ಲೆಯ ಕಲೆಗಳನ್ನು ವೇದಿಕೆಯಲ್ಲಿ ಪರಿಚಯಿಸಿದ್ದೇವೆ. ಈ ವರ್ಷ ಜಿಲ್ಲೆಯ ಕಲೆಯ ಜೊತೆಗೆ ಹೊರ ಜಿಲ್ಲೆ ಕಲೆ ಹಾಗೂ ಉಡುಪಿಯ ಭಾರ್ಗವಿ ನೃತ್ಯಕಲಾ ತಂಡ, ಹುಲಿವೇಷ, ಜಿ ಕನ್ನಡದ ಕಾಮೇಡಿ ಕಿಲಾಡಿ ತಂಡವು ಬಾಗವಹಿಸಲಿದೆ. ಎಂದರು.
ಉದ್ಯಮಿ ಸುರೇಶ ನಾಯಕ ಅಲಗೇರಿ ಮಾತನಾಡಿ ತಾಲೂಕಿನ ಕಲೆಯ ಜೊತೆಗೆ ಜಿಲ್ಲೆ ರಾಜ್ಯ ಮಟ್ಟದವರೆಗಿನ ಕಲೆ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ ಅಂಕೋಲಾ ತಾಲೂಕಿನಲ್ಲಿ ಎರಡನೆ ವರ್ಷ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು ಎಲ್ಲಾ ಕಾರ್ಯಕ್ರಮಗಳಿಗೂ ಪ್ರತಿಯೊಬ್ಬರ ಬೇಂಬಲ ಅಗತ್ಯವಿದೆ. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೊತ್ಸಾಹಿಸಿ ಎಂದು ಎಲ್ಲರ ಸಹಕಾರ ಕೋರಿದರು.
ಕಲಾ ವೇದಿಕೆಯ ವಿಜಯಕುಮಾರ ನಾಯ್ಕ, ಮಂಜುನಾಥ ಜಾಂಬಳೇಕರ್, ನಾಗರಾಜ ಜಾಂಬಳೇಕರ್, ಅಶೋಕ ನಾಯ್ಕ, ಅರುಣ ಶೆಟ್ಟಿ, ನಿಲೇಶ ನಾಯ್ಕ, ಗಜು ನಾಯ್ಕ, ರಜತ ನಾಯ್ಕ, ಅನಿಲ ಮಹಾಲೆ, ನರೇಶ ರಾಯ್ಕರ, ಬೊಮ್ಮಯ್ಯ ನಾಯ್ಕ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Leave a Comment