ಯಲ್ಲಾಪುರ: ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದ ನಾಯಕನ ಕೆರೆ ಸುತ್ತ ಮುತ್ತ ಜರುಗಿತು.
ಪಟ್ಟಣ ಪಂಚಾಯತಿ ಅದ್ಯಕ್ಷರಾದ ಶಿರೀಷ್ ಪ್ರಭು ಜೇನುಗೂಡು ಬಳಗಕ್ಕೆ ಸಾಥ್ ಕೊಟ್ಟು ತಂಪುಪಾನೀಯ ವಿತರಿಸಿದರು.
ಈ ಸಂಧರ್ಭದಲ್ಲಿ ಜೇನುಗೂಡು ಸದಸ್ಯರಾದ ಹರೀಶ್ ಶೇಟ್ ,ಮಧು ಕಸಬೆ, ಅಣ್ಣಪ್ಪ ಮರಾಠಿ, ವಿನಾಯಕ್ ಮಡಿವಾಳ, ಗಜಾನನ ಕೋಣೆಮನೆ, ಸಂದೀಪ್ ಗೌಡ ಹಾಜರಿದ್ದರು.
ಸಾರ್ವಜನಿಕರು ಜೇನುಗೂಡಿನೊಡನೆ ಕೈ ಜೋಡಿಸಿ. ಬಳಗದ ಸಮಾಜ ಸೇವೆಗೆ ಹರ್ಷ ವ್ಯಕ್ತಪಡಿಸಿದರು.
Leave a Comment