ಕಾರವಾರ:
ಕೈಮಗ್ಗ ಹಾಗೂ ಕೈಮಗ್ಗ ಸಂಬಂಧಿತ ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗಣತಿ ಕಾರ್ಯವನ್ನು ಮೇ ಕಾರ್ವಿ ಡೆಟಾ ಮ್ಯಾನೆಜಮೆಂಟ್ (M/s Karvy Data Management Services Limited) ಏಜೆನ್ಸಿ ರವರಿಗೆ ವಹಿಸಲಾಗಿದ್ದು ನೇಕಾರರು ಇದರ ಸದುಪಯೋಗ ಪಡೆಯಲು ಸದರಿ ಸಂಸ್ಥೆಯವರು ಭೇಟಿಕೊಟ್ಟಾಗ ಸ್ಥಳೀಯವಾಗಿ ಲಭ್ಯವಿದ್ದು, ಅವರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಖಜಾನೆ ಎದುರು, ಎಮ್.ಜಿ. ರೋಡ್, ಕಾರವಾರ ಇವರನ್ನು ಸಂಪರ್ಕಿಸಲು ಕೋರಿದೆ.
Leave a Comment