ದಾಂಡೇಲಿ:
ಕಾರವಾರದ ಆಶಾನಿಕೇತನ ಶಾಲೆಯ ಕಿವುಡು, ಮೂಕ ಅಂಗವೈಖಲ್ಯ ಹೊಂದಿರುವ ದಾಂಡೇಲಿಯ ಸಹೋದರ-ಸಹೋದರಿಯರಾದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ತಾನ ಪಡೆದುಕೊಂಡಿದ್ದಾರೆ.
ನಗರದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಎಂಬ ಅಣ್ಣ ತಂಗಿ ಈರ್ವರೂ ಹುಟ್ಟಿನಿಂದಲೇ ಕಿವುಡ-ಮೂಕರಾಗಿದ್ದವರಾಗಿದ್ದಾರೆ. ಈ ಈರ್ವರೂ ಮಕ್ಕಳೂ ಕಾರವಾರದ ಆಶಾನಿಕೇತನ ಕಿವುಡ-ಮೂಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟೂ ಅಂಕ 425 ಇರುತ್ತದೆ. ಈ ಅಂಕದಲ್ಲಿ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಒಟ್ಟೂ 338 ಅಂಕಗಳನ್ನು ಪಡೆದು ಆಶಾನಿಕೇತನ ಶಾಲೆಗೆ ದ್ವಿತೀಯ ಸ್ಥಾನ ಬಂದಿದ್ದರೆ, ಪ್ರಸಾದ ಅರುಣ ಕಪಿಲೇಶ್ವರಿ 330 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಬಂದಿರುತ್ತಾರೆ.
Leave a Comment