ಶಂಶುದ್ಧೀನ್ ಸರ್ಕಲ್ನಲ್ಲಿ ಸೇರಿದ ಯುವಕರು ಗೋವೊಂದನ್ನು ತಂದು ಪೂಜಿಸಿ ಗೋಮಾತೆಯ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಕಾನೂನು ಅತ್ಯಂತ ಸಂತಸ ತಂದಿದೆ. ಗೋವನ್ನು ನಾವು ದೇವರಂತೆ ಪೂಜಿಸುತ್ತಿರುವುದರಿಂದ ಈ ಕಾನೂನು ದೇಶದಲ್ಲಿಯ ಹಲವಾರು ಗೊಂದಲಗಳಿಗೆ, ಅಶಾಂತಿಗೆ ಕಾರಣವಾಗುತ್ತಿರುವ ಸನ್ನಿವೇಶಗಳನ್ನು ತಪ್ಪಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹುರುಳಿಸಾಲ್ ನಿವಾಸಿಗಳಾದ ಲಕ್ಷ್ಮಣ ನಾಯ್ಕ, ರಾಜೇಶ ನಾಯ್ಕ, ಲೋಕೇಶ, ಪಾಂಡು ನಾಯ್ಕ, ರವಿ ನಾಯ್ಕ, ಶಿವಾ ನಾಯ್ಕ, ವಿನೋದ ನಾಯ್ಕ, ರಾಜು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Leave a Comment