ದಾಂಡೇಲಿ:
ಒಂದು ಊರಿನ ಪ್ರಗತಿಯಲ್ಲಿ ಅಲ್ಲಿನ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವವಾದುದು. ಶೈಕ್ಷಣಿಕವಾಗಿ ಪ್ರಗತಿಯಾದರೇ ಮಾತ್ರ ದೇಶದ ಅಭಿವೃದ್ಧಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವಾರು ಉಪಯುಕ್ತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ಅವರು ಹೇಳಿದರು.
ಅವರು ಬುಧವಾರ ನಗರದ ರೋಟರಿ ಶಿಕ್ಷಣ ಸಂಸ್ಥೆಯ ರೋಟರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರ. ಗುಣಮಟ್ಟದ ಶಿಕ್ಷಣ ಹಾಗೂ ಗುಣಮಟ್ಟದ ಮೂಲಸೌಕರ್ಯಗಳನ್ನು ರೋಟರಿ ಶಿಕ್ಷಣ ಸಂಸ್ಥೆ ಹೊಂದಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಡಾ. ಹರಿಲಾಲ ಮೆಹರ್ವಾಡೆ, ರೋಟರಿ ಕ್ಲಬ್ನ ಅಧ್ಯಕ್ಷ ನಾಗೇಶ ನಾಯ್ಕವಾಡಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಬಾವಾಜಿ, ಖಜಾಂಚಿ ಅಶುತೋಷ್ ರಾಯ್ ಹಾಗೂ ರೋಟರಿ ಪ್ರಮುಖರಾದ ಪಿ.ವಿ. ಹೆಗಡೆ, ಯು.ಡಿ.ನಾಯ್ಕ, ಎಸ್.ಜಿ. ಬಿರಾದರ, ಎನ್.ಎನ್. ಸರಮೊಕದ್ದಮ್, ರಾಜೇಶ ವರ್ಣೇಕರ, ಗಣೇಶ ಕಾಮತ, ಅರುಣಾದ್ರಿ ರಾವ್, ಜಿ.ಇ. ಉಮೇಶ, ರಾಜೇಶ ತಿವಾರಿ, ರವಿ ನಾಯಕ, ಅರುಣ ನಾಯಕ, ಆರ್.ಪಿ. ನಾಯ್ಕ, ಎ.ಆರ್. ಬಾವಾಜಿ, ಶಂಕರ ರೆಡ್ಡಿ, ಅನಿಲ ಪಾಟ್ನೇಕರ, ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆ ಜ್ಯೋತಿ ಕಲ್ಲಣ್ಣವರ, ಡಾ. ಜ್ಯೋತಿ ಪಾಟೀಲ, ಪ್ರೇಮಾ ಬಾವಾಜಿ, ರಾಜಶ್ರೀ ನಾಯಕ ಮುಂತಾದವರು ಉಪಸ್ಥಿತರಿದ್ದರು.
14ದಾಂಡೇಲಿ1- ರೋಟರಿ ಶಿಕ್ಷಣ ಸಂಸ್ಥೆಯ ರೋಟರಿ ಶಾಲೆಯ ನೂತನ ಕೊಠಡಿಗಳನ್ನು ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ಉದ್ಘಾಟಿಸುತ್ತಿರುವುದು.
Leave a Comment