ಹೊನ್ನಾವರ:
ದಿನಾಂಕ: 07-06-2017 ರಂದು ಸ.ಹಿ.ಪ್ರಾ. ಶಾಲೆ, ಗುಂಡಬಾಳ ನಂ. 2 ಇಲ್ಲಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವ ಟ್ರಸ್ಟ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ನಡೆಯಿತು. ಅಧ್ಯಕ್ಷರಾಗಿ ಶಾಲೆಯ S.ಆ.ಒ.ಅ. ಅಧ್ಯಕ್ಷರಾದ ಶ್ರೀ ಮಂಜುನಾಥ ಶೇಟ್ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಟ್ರಸ್ಟಿನ ಸದಸ್ಯರಾದ ಶ್ರೀ ಮಾರುತಿ ಜಿ. ಪ್ರಭು ರವರು ಆಗಮಿಸಿ ಪ್ರತಿ ವರ್ಷ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇದೇ ರೀತಿ ಪ್ರೋತ್ಸಾಹ ನೀಡುತ್ತಿರುವುದಾಗಿ ಹೇಳಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕರಾದ ಶ್ರೀ ಎಸ್.ಜಿ. ಭಟ್ಟ ಸ್ವಾಗತಿಸಿದರು. ಶ್ರೀಮತಿ ಶಶಿರೇಖಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಶ್ರೀಮತಿ ಸುಗೀತಾ ಭಟ್ಟ ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯ ಕುರಿತು ವಿವರಿಸಿ ಅಭಿನಂದನೆ ಸಲ್ಲಿಸಿದರು.
Leave a Comment