ದಾಂಡೇಲಿ :
ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ರಾಜ್ಯ ಸರ್ಕಾರದ ಹಾಗೂ ಬೆಂಗಳೂರಿನ ಸೀಮೆನ್ಸ್ ಇಂಡಸ್ಟೀ ಸಾಫ್ಟವೇರ್ ಉದ್ಯಮದ ಸಹಯೋಗದಲ್ಲಿ ಶ್ರೇಷ್ಠತಾ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದೆಂದು ಸಚಿವ ಆರ್.ವಿ ದೇಶಪಾಂಡೆ ನುಡಿದರು.
ಅವರು ನಗರದಲ್ಲಿ ಸ್ಥಳೀಯ ಜಿಟಿಟಿಸಿ ಕೇಂದ್ರದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸೀಮನ್ಸ್ನ ಉನ್ನತ ಉತ್ಪಾದನಾ ಘಟಕದ ಮುಖ್ಯಸ್ಥರೊಂದಿಗೆ ಶ್ರೇಷ್ಠತೆ ಕೇಂದ್ರ ಸ್ಥಾಪನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ದಾಂಡೇಲಿ, ಮೈಸೂರ, ಬೆಂಗಳುರ, ಕಲ್ಬುರ್ಗಿ ನಗರಗಳಲ್ಲಿನ ಜಿಟಿಟಿಸಿ ಕೇಂದ್ರಗಳನ್ನು ಶ್ರೇಷ್ಠತಾ ಕೇಂದ್ರಗಳನ್ನಾಗಿ ವಿಸ್ತರಿಸಲಾಗುವದೆಂದರು. ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ತಗಲುವ ಒಟ್ಟು ವೆಚ್ಚ 2031.80 ಕೋಟಿ ಅದರಲ್ಲಿ ಸೀಮನ್ಸ್ ವಂತಿಗೆ ರೂ.182248 ಕೋಟಿ (ಶೇ.90) ಹಾಗೂ ಸರ್ಕಾರದ ವಂತಿಗೆ, ರೂ.219.12 (ಶೇ.10)ಕೋಟಿ ಹಣ ವಂತಿಕೆ ಮಾಡಲಾಗುವದು. ಪ್ರತಿ ಕೇಂದ್ರಕ್ಕೆ ಅಂದಾಜು 500 ಕೋಟಿ ವೆಚ್ಚವಾಗಲಿದೆ ಎಂದರು.
ಶ್ರೇಷ್ಠತಾ ಕೇಂದ್ರದಲ್ಲಿ ವಿವಿಧ ವಿದ್ಯಾಲಯದಿಂದ ಆಯ್.ಟಿ.ಐ, ಡಿಪ್ಲೋಮಾ, ಇಂಜೀನಿಯರಿಂಗ್ ಪದವಿ ಪಡೆದವರಿಗೆ ವೃತ್ತಿ ಪರ ಉತ್ಕøಷ್ಠತೆಯ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಠದಲ್ಲಿ ಉತ್ತಮ ಉದ್ಯೋಗ ಪಡೆಯಲು ಅಥವಾ ಸ್ವಯಂ ಉದ್ಯೋಗ ಸ್ಥಾಪಿಸಲು ಅನುವು ಮಾಡಿಕೊಡಲಾಗುವದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ ಗದಗ ಮೈಸೂರಿನ ಜಿಟಿಟಿಸಿಯ ಅಧೀಕ್ಷಕ ಕೆ.ಎಲ್ ಪ್ರಕಾಶ, ಸೀಮನ್ಸ್ನ ಉತ್ಪಾದನಾ ಘಟಕದ ಮುಖ್ಯಸ್ಥ ಆಶೀಶ ಶರ್ಮಾ, ಅಧೀಕ್ಷಕ ದೀಪಕ್ ಜಾಧವ, ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆ, ಉಪಾಧ್ಯಕ್ಷ ಅಶ್ಪಾಕ್ ಶೇಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ತಂಗಳ, ಸ್ಥಳಿಯ ಯುವ ಕಾಂಗ್ರೆಸ್ನ ಅಧ್ಯಕ್ಷ ರಾಜೇಶ ರುದ್ರಪಾಟಿ, ಜಿಟಿಟಿಸಿಯ ಪ್ರಾಂಶುಪಾಲ ಖಾನ ಮೆಹಬೂಬ ಅಲಿ, ಉಪನ್ಯಾಸಕ ಅರುಣ ನಾಯ್ಕ, ಸಂಸ್ಥೆಯ ಸಿಬ್ಬಂದಿಗಳು, ನಗರಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು.
Leave a Comment