ಕಾರವಾರ:
ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಬಿ.ಸಿ.ಎ. ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಸಿ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ ಸಾಧಿಸಿದ್ದಾರೆ.
ಕುಮಾರಿ ಅಶ್ವಿನಿ ಕುರ್ಡೇಕರ ಮತ್ತು ಕರೀಷ್ಮಾ ಕೊಳಂಕರ 97% ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಸೋನಾಲಿ ಬಾಂದೇಕರ 93.05% ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ, ಕುಮಾರಿ ಅಕ್ಷತಾ ರಾಯ್ಕರ್ 93.38% ಅಂಕಗಳನ್ನು ಪಡೆದು ತೃತೀಯ ಸ್ಥಾನ, ಕುಮಾರಿ ಐಶ್ವರ್ಯಾ ನಾಯಕ್ 90.75% ಅಂಕಗಳನ್ನು ಪಡೆದು ನಾಲ್ಕನೇಯ ಸ್ಥಾನ ಹಾಗೂ ಕು. ಸ್ನೇಹಲ್ ನಾಯಕ್ 90% ಗಳಿಸಿ ಐದನೇಯ ಸ್ಥಾನ ಪಡೆದಿದ್ದಾರೆ.
Leave a Comment