ಹೊನ್ನಾವರ:
ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾಜದಲ್ಲಿ ಒಂದಾದ ಅಂಬಿಗ ಸಮಾಜದ ಶೃಂಗೇರಿ ಗುರುದರ್ಶನ ಕಾರ್ಯಕ್ರಮ ಜುಲೈ 15ರಂದು ಶನಿವಾರ ಗುರುಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಎಚ್ ವಿ. ನರಸಿಂಹಮೂರ್ತಿಯವರು ತಿಳಿಸಿದ್ದಾರೆ.
ಶೃಂಗೇರಿ ಜಗದ್ಗುರು ಪೀಠವು ಎಲ್ಲಾ ಸಮಾಜದವರು ನಡೆದುಕೊಳ್ಳುವ ಗುರುಪೀಠವಾಗಿದ್ದು, ಅಂಬಿಗ ಸಮಾಜವು ಕೂಡ ಅನಾದಿ ಕಾಲದಿಂದಲೂ ಗುರುಪೀಠವಾಗಿ ನಡೆದುಕೊಂಡು ಬಂದಿದೆ. ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧು ಶೇಖರ ಮಹಾಸ್ವಾಮಿಗಳವರ ಪವಿತ್ರ ಚಾರ್ತುಮಾಸ್ಯದ ಸಂದರ್ಭದಲ್ಲಿ ಪ್ರಥಮ ಶನಿವಾರ ಅಂಬಿಗ ಸಮಾಜಕ್ಕೆ ಮೀಸಲಿಡಲಾಗಿದೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಗಂಗೆಕೊಳ್ಳದ 18 ಹಳ್ಳಿಗಳ ಅಂಬಿಗ ಸಮಾಜದ ಮುಖಂಡರು ಸೇರಿದಂತೆ ಸಮಾಜದವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಗದ್ಗುರುಗಳ ಹಾಗೂ ಶಾರದಾಂಬೆಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment