ಕಾರವಾರ: ರಾಷ್ಟ್ರೀಯ ಹೆದ್ದಾರಿ-66(17) ಸಕ್ಷಮ ಪ್ರಾಧಿಕಾರ ಮತ್ತು ಕುಮಟಾ ವಿಬಾಗದ ಸಹಾಯಕ ಆಯುಕ್ತರು ಚತುಷ್ಟತ ಕಾಮಗಾರಿಗಾಗಿ ಕುಮಟಾ ಮತ್ತು ಅಂಕೋಲಾ ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂ¨ಂಧ 3ಡಿ ಅಧಿಸೂಚನೆಯನ್ನು ಹೊರಡಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ.
ಪರಿಹಾರ ಪಡೆದುಕೊಳ್ಳಲು ದಾಖಲೆಗಳನ್ನು ಹಾಜರುಪಡಿಸಲು ಆಗಸ್ಟ 23 ಅಂತಿಮ ದಿನವಾಗಿರುತ್ತದೆ. ಕುಮಟಾ ತಾಲೂಕಿನಲ್ಲಿ ಆಗಸ್ಟ 29 ರಂದು ಹಿರೇಗುತ್ತಿ, ಬರ್ಗಿ ಗ್ರಾಮ ಚಾವಡಿಗಳಲ್ಲಿ ಮತ್ತು ಆಗಸ್ಟ 30 ರಂದು ದೀವಗಿ, ದೇವಗಿರಿ ಗ್ರಾಮ ಚಾಡಿಗಳಲ್ಲಿ ಹಾಗೂ ಅಂಕೋಲಾ ತಾಲೂಕಿ£ಲ್ಲಿ ಆಗಸ್ಟ 31 ರಂದು ಬೆಳಸೆ ಗ್ರಾಮ ಚಾವಡಿಯಲ್ಲಿ ಮತ್ತು ಸೆಪ್ಟಂಬರ್ 1 ರಂದು ಬೆಳ¸,É ವಂದಿಗೆ, ಅಲಗೇರಿ ಗ್ರಾಮ ಚಾವಡಿಗಳಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳ ಪರಿಹಾರ ಪಾವತಿ ಮಾಡಲಾಗುವದು. ಆಗಸ್ಟ 31 ರಿಂದ ಸೆಪ್ಟಂಬರ 5 ರವರೆಗೆ ಪರಿಹಾರ ಪಾವತಿಸಿದ ಜಮೀನುಗಳ ಭೌತಿಕ ಭೂಸ್ವಾಧಿನತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಹಸ್ತಾಂತರಿಸಲಾಗುವದು ಎಂದು ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
Leave a Comment