ಕಾರವಾರ:
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಡಾ. ವಿಕ್ರಮ ಸಾರಾಬಾಯಿ ಜನ್ಮದಿನಾಚರಣೆ ಅಂಗವಾಗಿ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಐ. ಕೆ. ನಾಯ್ಕ ಉಪನ್ಯಾಸ ನೀಡಿದರು.
ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಸುರೇಶ ಅರಿಕೆರಾ ಕಾರ್ಯಕ್ರಮದಲ್ಲಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ ದೇಶಪಾಂಡೆ ಸ್ವಾಗತಿಸಿದರು. ಕವಿತಾ ಮೇಸ್ತಾ ನಿರ್ವಹಿಸಿದರು. ಅಕ್ಷತಾ ನಾಯ್ಕ ವಂದಿಸಿದರು. ಜಿಲ್ಲಾಡಳಿತ, ಉತ್ತರ ಕನ್ನಡ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪೋತ್ಸಾಹಕ ಸೋಸೈಟಿ ಕಾರ್ಯಕ್ರಮ ಸಂಘಟಿಸಿತ್ತು.
Leave a Comment