ಕಾರವಾರ:
ಕೆರವಡಿಯ ಕಡಿಯೆ ಮಜರೆಯ ಕೃಷ್ಣಾ ಗುನಗಿ ಎಂಬಾತರ ಮನೆಯೊಳಗೆ 15 ಅಡಿ ಉದ್ದದ ಕಾಳಿಂಗ ಸರ್ಫವೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಗೊಪಿಶಟ್ಟಾ ಅರಣ್ಯ ವಿಭಾಗದವರು ಉರಗ ತಜ್ಞ ರಮೇಶ್ ಬಡಿಗೇರಿ ಸಹಾಯದಿಂದ ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದರು. ಕಟ್ಟಿಗೆ ಹಾಗೂ ನಿರುಪಯುಕ್ತ ವಸ್ತುಗಳನ್ನು ಇರಿಸಿದ್ದ ಕೋಣೆಯಲ್ಲಿದ್ದ ಹಾವನ್ನು ಚಾಣಾಕ್ಷತನದಿಂದ ರಮೇಶ್ ಬಡಿಗೇರಿ ಹಿಡಿದರು. ಈ ಹಾವು 20 ಕೆಜಿ ತೂಕವಿದ್ದು, ಅದನ್ನು ಕಾಡಿಗೆ ಬಿಡಲಾಯಿತು.
Leave a Comment