ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ
ಇದನ್ನು ದಯವಿಟ್ಟು ಓದಿ, ಸಹಾಯ ಮಾಡಿ, ಶೇರ್ ಮಾಡಿ
ಕರುಳಕುಡಿಯನ್ನು ಉಳಿಸಲು ಹೆಣಗಾಡುತ್ತಿರುವ ಅಭದ್ರತೆಯ ಸುಭದ್ರ
ನಾವು-ನೀವೆಲ್ಲರೂ ಕೈ ಜೋಡಿಸಿದರೇ ಪರಶುರಾಮನ ಜೀವ ಉಳಿಸಬಹುದು. ಹಾಗಾದ್ರೆ ತಡವೇಕೆ?
ದಾಂಡೇಲಿ : ಪಾಪಾ, ಯಾರಿಗೂ ಈ ರೀತಿಯ ದುರ್ಗತಿ ಬರಬಾರದು. ಕಷ್ಟಪಟ್ಟು ಸಾಕಿ ಸಲಹಿ, ಸಾಲ ಸೋಲ ಮಾಡಿ ಡಿಪ್ಲೋಂ ಕಲಿಸಿ, ಇನ್ನಾದರೂ ಬದುಕು ಹಸನಾಗಬಹುದೆಂದು ಮಹಾದಾಸೆ ಇಟ್ಟುಕೊಂಡಿದ್ದ ತಾಯಿಯೊಬ್ಬರು ಇದ್ದೊಬ್ಬ ಮಗನನ್ನು ಉಳಿಸಲು ಹೆಣಗಾಡುತ್ತಿರುವ ಕಣ್ಣೀರ ನೈಜ ಘಟನೆಯೆ ಈ ಬರಹದ ವಸ್ತು.
ಇದು ಬರಹ ಎನ್ನುವುದಕ್ಕಿಂತಲೂ, ನಮ್ಮ ಕಣ್ಣ ಮುಂದೆ ಬೆಳೆದು ನಿಂತ ಚಿರ ಯೌವ್ವನದ ಯುವಕ, ಸದಾ ಕ್ರಿಯಾಶೀಲತೆ, ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನು ಖುಷಿ ಖುಷಿಯಲ್ಲಿಟ್ಟುಕೊಳ್ಳಬೇಕೆಂಬ ದಾವಂತದಲ್ಲಿದ್ದ ಆ ಯುವಕನ ಕನಸೆ ನುಚ್ಚು ನೂರಾದ ದುರಂತ ಘಟನೆಯಿದು. ಆದರೂ ಕಾಲ ಮುಗಿದಿಲ್ಲ. ಆದರೆ ನಾವು-ನೀವು ಮನಸ್ಸು ಮಾಡಬೇಕಷ್ಟೆ.
ಜೊಯಿಡಾ ತಾಲೂಕಿನ ಆವೇಡಾ (ಗಣೇಶಗುಡಿ) ಗ್ರಾಮದ ಶ್ರೀಮತಿ ಸುಭದ್ರ ಮತ್ತು ಸುಭಾಸ ಮಾಲುಸರೆ ದಂಪತಿಗಳ ಏಕೃಕ ಪುತ್ರ ನೂರಾರು ಕನಸುಗಳನ್ನು ಹೊತ್ತುಕೊಂಡಿದ್ದ ಪರಶುರಾಮ ಮಾಲುಸರೆ, ವಯಸ್ಸು: 24 ಈತನೆ ಜೀವನ್ಮಾರಣ ಹೋರಾಟದಲ್ಲಿ ದಿನದೂಡುತ್ತಿರುವ ನತದೃಷ್ಟ ಯುವಕ. ದಿನಾಂಕ: 11.08.2017 ರಂದು ಗಣೇಶಗುಡಿಯಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಇವನು ಗುಣಮುಖನಾಗಬೇಕಾದರೇ ರೂ: 8 ಲಕ್ಷ ಹಣ ವೆಚ್ಚವಾಗುವುದಾಗಿ ಅಲ್ಲಿಯ ವೈದ್ಯರು ತಿಳಿಸಿದ್ದಾರೆ.
ಕಿತ್ತು ತಿನ್ನುವ ಬಡತನ ಒಂದೆಡೆಯಾದರೇ ದುಡಿಯಲು ಅಡ್ಡಿ ಪಡುತ್ತಿರುವ ವಯಸ್ಸು ಇದು ಈತನ ತಂದೆ ತಾಯಿಗಳಿಗೊದಗಿದ ದುಸ್ಥಿತಿ. ಇದರ ಜೊತೆ ಜೊತೆಯಲ್ಲಿ ನಮಗೆ ಕೊಳ್ಳಿ ಇಡಬೇಕಾದ ಮಗನೇ………….ಹೀಗಾದನಲ್ಲ ಎಂಬ ತುಂಬಲಾರದ ನೋವು. ಸಾವಿರ ರೂಪಾಯಿಯನ್ನೆ ಜಮಾ ಮಾಡಲು ಹರಸಾಹಸ ಪಡುವ ಈ ಕುಟುಂಬಕ್ಕೆ ರೂ: 8 ಲಕ್ಷ ಹೊಂದಿಸುವುದು ಅಕ್ಷರಶ: ಆಗದಿರುವ ಮಾತು. ಒಂದು ವೇಳೆ ರೂ: 8 ಲಕ್ಷ ಹೊಂದಿಸದಿದ್ದರೇ ಜೀವ ಉಳಿಸಲೆಬೇಕೆಂದು ಬೆಳಗಾವಿಗೆ ಕರೆದುಕೊಂಡು ಹೋಗಲಾಗಿದ್ದ ಮಾನಸಪುತ್ರ ಪರಶುರಾಮನನ್ನು ಶವವಾಗಿ ಮನೆಗೆ ತರಬೇಕಾದ ಸಂದಿಗ್ದ ಸ್ಥಿತಿ.
ಖಂಡಿತವಾಗಿ ಈ ಕುಟುಂಬಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸಲು ಸಾಧ್ಯವೆ ಇಲ್ಲ. ಗೊತ್ತಿದ್ದು ಅಥವಾ ಗೊತ್ತಾಗಿ ಈ ಯುವಕನನ್ನು ನಾವು ಸಾಯಲು ಬಿಡುವುದೆ ಬೇಡ. ತಮ್ಮೆಲ್ಲರಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ದಯವಿಟ್ಟು ನಾವು-ನೀವು ಎಲ್ಲರು ಸೇರಿ ಪರಶುರಾಮನನ್ನು ಉಳಿಸಿ, ಆ ಕುಟುಂಬಕ್ಕೆ ಬಹುದೊಡ್ಡ ಬದುಕು ಕಟ್ಟಿಕೊಡೋಣ ಎಂಬ ವಿನಮ್ರ ನಿವೇಧನೆ ನನ್ನದು.
ಈ ಯುವಕ ಇನ್ನಷ್ಟು ವರ್ಷಗಳ ಕಾಲ ಬದುಕಬೇಕೆಂಬ ಬಯಕೆ ತಮಗೆಲ್ಲರಿಗೂ ಇದ್ದರೇ ಇನ್ನು ಮೂರು ದಿನದೊಳಗೆ ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಕೈಲಾದ ಧನ ಸಹಾಯವನ್ನು ಈ ಕೆಳಗಿನ ಉಳಿತಾಯ ಖಾತೆಗೆ ಜಮಾ ಮಾಡುವುದರ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ.
ನಾವಂತು ಈ ಕಾರ್ಯಕ್ಕೆ ಜೋಡಿಸಿದ್ದೇವೆ. ಆರಂಭ ಮಾಡಿದ್ದೇವೆ. ನಾವು ನಮ್ಮ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ ಗಾಂಧಿನಗರದ ಪರವಾಗಿ ರೂ: 1000/- ವನ್ನು ನೀಡುತ್ತಿದ್ದೇವೆ. ಹಾಗೆಯೇ ದಾಂಡೇಲಿ, ಜೊಯಿಡಾ ಮತ್ತು ಹಳಿಯಾಳ ತಾಲೂಕಿನ ಎಲ್ಲ ಸಾರ್ವಜನಿಕ ಗಣೇಶ ಮಂಡಳಗಳು, ಸಾರ್ವಜನಿಕರು, ಉದ್ಯಮಿಗಳು, ಸಮಾಜ ಸೇವಕರು ಧನ ಸಹಾಯ ಮಾಡಿ, ಅಭದ್ರತೆಯಲ್ಲಿರುವ ಸುಭದ್ರಮ್ಮನ ಕುಟುಂಬದ ಆರುತ್ತಿರುವ ದೀಪವನ್ನು ಪ್ರಾಂಜಲ ಮನಸ್ಸಿನಿಂದ ಬೆಳಗಿಸೋಣ.
ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗದಿದ್ದಲ್ಲಿ ನಮ್ಮ ಇಂಟರ್ ನೆಟ್ ಝೋನ್, ಕೇಸರಕರ ಬಿಲ್ಡಿಂಗ್, ಬಿಸೈಡ್ : ಕೆನರಾ ಬ್ಯಾಂಕ್, ಜೆ.ಎನ್.ರಸ್ತೆ, ದಾಂಡೇಲಿ. 08284-230029 ಇಲ್ಲಿ ಇಡಲಾದ ಡೋನೆಶನ್ ಬಾಕ್ಸ್ ಗೆ ಹಾಕಿ ಜೀವ ಉಳಿಸುವ ಪುಣ್ಯ ಕಾರ್ಯದ ಪುಣ್ಯ ಬಾಗಿಗಳಾಗಬೇಕಾಗಿ ನಮ್ರ ವಿನಂತಿ.
-ಸಂದೇಶ್.ಎಸ್.ಜೈನ್
Leave a Comment