ಕುಮಟಾ:
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಮ್ಮೆಯಷ್ಟೆ ಕರ್ನಾಟಕ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರಿಂದ ಹೆದರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಪಕ್ಷದ ನಾಯಕ ಯಡಿಯೂಪ್ಪನವರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧಿ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.
ರವಿವಾರದಂದು ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಉಧ್ಯಮಿ ಯಶೋಧರ ನಾಯ್ಕ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಅವರ ಬೆಂಬಲಿಗರಿಗೆ ಪಕ್ಷದ ಧ್ವಜ ಹಾಗೂ ಶಾಲು ನೀಡಿ ಪಕ್ಷಕ್ಕೆ ಸ್ವಾಗತಿಸಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನುದ್ದೇಶಿಸಿ ಆವರು ಮಾತನಾಡುತ್ತಿದ್ದರು.
ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಒಮ್ಮೆ ಬೆಟ್ಟಿ ಕೊಟ್ಟಿದ್ದಕ್ಕೆ ಹೆದರಿರುವ ರಾಜ್ಯ ಕಾಂಗ್ರೆಸಿಗರು ತರಾತುರಿಯಲ್ಲಿ ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಸಿದ್ದಾರೆ. ಇನ್ನೂ ಪದೆ ಪದೇ ಅಮಿತ ಶಾ ಅವರು ರಾಜ್ಯಕ್ಕೆ ಭೆಟ್ಟಿ ಕೊಡುವವರಿದ್ದಾರೆ. ಆಗೆಷ್ಟು ಈ ಕಾಂಗ್ರೆಸಿಗರು ಹೆದರಲಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿದೆ ಎಂದು ಜಗದೀಶ ಶೆಟ್ಟರ್ ವ್ಯಂಗ್ಯವಾಗಿ ಹೇಳಿದರು.
ದೇಶದಲ್ಲಿ ಬಿಜೆಪಿ ಪಕ್ಷ ನಡೆಸಿದ ಸದಸ್ಯತ್ವ ಅಭಿಯಾನದಲ್ಲಿ 11 ಕೋಟಿ ಜನ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 84 ಲಕ್ಷ ಜನ ಪಕ್ಷದ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಹೆಂಡ, ಹಣ ಹಂಚಿ ಈ ವರೆಗೆ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಪಕ್ಷದವರಿಗೆ ಹಾಗೂ ಆ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೂತ ಮಟ್ಟದ ಕಾರ್ಯಕರ್ತರು ಯಾರು, ಬೂತ ಮಟ್ಟದ ಸಭೆ ಅಂದರೆ ಎನು ಎಂಬುದೇ ಗೊತ್ತಿಲ್ಲ. ವಿಧಾನಸಭೆ ಸೇರಿದಂತೆ ಎಲ್ಲಡೆ ನಿದ್ರೆ ಮಾಡುವ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದ ಬೂತ ಮಟ್ಟದ ಕಾರ್ಯಕರ್ತರ ಸಭೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಸಭೆ ಮಾಡುವ ಮೊದಲು ಪ್ರತಿಯೊಂದು ಜಿಲ್ಲೆಯಲ್ಲಿ ನಿಮ್ಮ ಪಕ್ಷದ ಮೂಲಕ ಎಷ್ಟು ಬೂತ ರಚಿಸಿದ್ದಿರಿ ಅದರಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದರ ಲೆಕ್ಕ ಕೊಡಿ ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿದ್ದ ಲೋಕಾಯುಕ್ತವನ್ನ ಕಾಂಗ್ರೆಸ್ ಪಕ್ಷ ಬಲಹೀನಗೊಳಿಸಿ ವಿರೋಧಿ ಪಕ್ಷದವರಿಗೆ ವಿನಾಕಾರಣ ತೊಂದರೆ ಕೊಡುವ ಉದ್ದೇಶದಿಂದ ಎಸಿಬಿಯನ್ನು ಹುಟ್ಟುಹಾಕಿದೆ. ಸಿದ್ದರಾಮ್ಯನವರ ಮೇಲೆ ಎಸಿಬಿಯಲ್ಲಿ 25ಕ್ಕಿಂತಲು ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರು ಅದರ ಕುರಿತು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವುದು, ಎಫ್ಐಅರ್ ದಾಖಲಿಸುತ್ತಿಲ್ಲ. ಡಿಎಸ್ಪಿ ಗಣಪತಿ ಆತ್ಮಹತ್ಯೆ, ಲಂಚಸ್ವೀಕಾರ, ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಸಚಿವ ಜಾರ್ಜ, ಆಂಜನೇಯ, ಮೇಟಿ ಅವರನ್ನು ಬಂಧಿಸುವುದರ ಬದಲು ಮುಖ್ಯಮಂತ್ರಿಗಳ ಅಧಿನದಲ್ಲಿರುವ ಸಿಐಡಿ ಇಲಾಖೆ ಆ ಪ್ರಕರಣದಲ್ಲಿ ಹುರುಳಿಲ್ಲ ಎಂದು ಕ್ಲಿನ್ಚೀಟ್ ನೀಡುತ್ತಿದೆ ಎಂದು ಆರೋಪಿಸಿದ ವಿರೋಧಿ ಪಕ್ಷದ ನಾಯಕ ಜಗದೀಶ ಶೆಟ್ಟರ್, ಅರ್ಕಾವತಿ ಬಡಾವಣೆ ನಿರ್ಮಾಣದ ವಿಷಯದಲ್ಲಿ ಮುಖ್ಯಮಂತ್ರಿಗಳು ಹಾಗು ಅವರ ಪಕ್ಷದವರು ಕೋಟ್ಯಾಂತರ ರೂಪಾಯಿ ಹೊಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಡಳಿತಕ್ಕೆ ಬರುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ ಅದನ್ನು ತಡೆಯುವ ಉದ್ದೇಶದಿಂದ ಎಸಿಬಿ ಬಳಸಿಕೊಂಡು ವಿರೋಧಿ ಪಕ್ಷದವರ ಮೇಲೆ ಎಫ್ಐಅರ್ ದಾಖಲಿಸುತ್ತಿದ್ದಾರೆ. ಜಾತಿ-ಧರ್ಮ-ದ್ವಜ ಇವುಗಳ ಹೆಸರಲ್ಲಿ ಸಮಾಜವನ್ನ ಒಡೆಯುವ ಕೆಲಸವನ್ನ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅರಣ್ಯ ಅತಿಕ್ರಮಣವನ್ನು ಪ್ರಾಸ್ತಾಪಿಸಿದ ಶೆಟ್ಟರ್, ಈ ವಿಷಯದ ಕುರಿತು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾಗೋಡು ತಿಮ್ಮಪ್ ಅವರು ಕಂದಾಯ ಸಚಿರವಾರ ನಂತರ ಈ ವಿಷಯದ ಕುರಿತು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿರುವುದು ಖೇದಕರ ಸಂಗತಿಯಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ನೀಡಲು ಈಗಾಗಲೆ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ವಿಳಾಸವೇ ಇಲ್ಲ. ವಿಧಾನಸಭೆ ಚುನಾವಣೆಯ ನಂತರ ಈ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು.
ಪಕ್ಷದ ವಿಧಾನ ಪರಿಷತ್ ಸದಸ್ಯೆ, ಚಿತ್ರನಟಿ ಶ್ರೀಮತಿ ತಾರಾ ಅನುರಾಧಾ ಮಾತನಾಡುತ್ತ, ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾರೆ ಎಲ್ಲವರ್ಗದ ಜನರಿಗೆ ಅನುಕೂಲವಾಗಿವ ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳು ಅನುಷ್ಠಾನಗೊಂಡಿದ್ದವು. ಆದರೆ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ನೋಡಿಕೊಂಡು ಯೋಜನೆಯನ್ನು ಜಾರಿಗೊಳಿಸುತಿದೆ. ಇದು ತಪ್ಪಬೇಕೆಂದರೆ ಮಹಿಳೆಯರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿಕೊಂಡರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ,ಕಾಗೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಪ್ರಧಾನಿ ಮೋದಿ ಒಡೆದು ಆಳುವ ನೀತಿಯನ್ನು ಅನುಸರಿಸದೆ ಎಲ್ಲರನ್ನು ಒಟ್ಟಾಗಿಸಿಕೊಂಡು ಅಭಿವೃದ್ಧಿಯ ಕಡೆ ಕೊಂಡ್ಯೋಯುತ್ತಿದ್ದಾರೆ ಎಂದರು.
ಪಕ್ಷದ ವಕ್ತಾರ ಪ್ರಮೋದ ಹೆಗಡೆ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯೆ ಗಾಯತ್ರಿ ಗೌಡ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ಮುಖಂಡ ರಾಮರಾವ್ ರಾಯ್ಕರ, ಸಂಸದ ಅನಂತಕುಮಾರ ಹೆಗಡೆ ಹಾಗು ಯಶೋಧರ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ದಿನಕರ ಶೆಟ್ಟಿ, ಜೆ.ಡಿ.ನಾಯ್ಕ, ಡಾ.ಎಂ.ಪಿ.ಕರ್ಕಿ, ಪಕ್ಷದ ಮುಖಂಡರಾದ ಎಂಜಿ.ನಾಯ್ಕ, ವಿನೋದ ಪ್ರಭು, ವೆಂಕಟ್ರಮಣ ಹೆಗಡೆ, ಸೂರಜ್ ನಾಯ್ಕ, ಡಾ.ಜಿ.ಜಿ.ಹೆಗಡೆ, ಎಂ.ಜಿ.ಭಟ್ಟ, ಉಮೇಶ ನಾಯ್ಕ, ಉದಯ ನಾಯಕ, ಗಜಾನನ ಗುನಗಾ, ರೂಪಾಲಿ ನಾಯ್ಕ,ಕಾರವಾರ, ನಾಗರಾಜ ನಾಯ್ಕ, ಪಕ್ಷ ಕುಮಟಾ ಮಂಡಲ ಅಧ್ಯಕ್ಷ ಕುಮಾರ ಮಾರ್ಕಾಂಡೇ, ಮಾ ಮುಂತಾದವರು ಉಪಸ್ಥಿತರಿದ್ದರು
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಜಿ.ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Leave a Comment