ಕಾರವಾರ: ಅಮದಳ್ಳಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಜನಪದ ದಿನಾಚರಣೆ ಅಂಗವಾಗಿ ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಜಾನಪದ ಉತ್ಸವ ಸಮಿತಿಯರಿಂದ ಶಾಲಾ ಮಕ್ಕಳ ಜಾನಪದ ಕಲಾಪ್ರದರ್ಶನ ನಡೆಯಿತು. ಕೋಲಾಟ ಸೇರಿದಂತೆ ವಿವಿಧ ಜಾನಪದ ಪ್ರಕಾರಗಳು ಗಮನ ಸೆಳೆದವು.
ನಗರಸಭೆ ಸದಸ್ಯ ಗಣಪತಿ ಉಳ್ವೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ, ಅಮದಳ್ಳಿ ಗ್ರಾಮ ಪಂಚಾಯತ ಸದಸ್ಯ ದೇವಾನಂದ ಎಲ್ ಚಂಡೇಕರ್ ಮಾತನಾಡಿದರು. ತೋಡೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ್, ನಗರಸಭೆ ಸದಸ್ಯ ರಮೆಶ ಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ರಾಣೆ, ಕಾರವಾರ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ನಾಗರಾಜ ಗೌಡ, ಅಮದಳ್ಳಿ ಜಾನಪದ ಉತ್ಸವ ಸಮಿತಿಯ ಚಂದ್ರಕಾಂತ ಆಗೇರ, ದಿನೇಶ ಪಡ್ತಿ, ಜ್ಯೋತಿ ದೆವಳಿ, ಶ್ರೀಧರ ತಳೇಕರ, ತೋಕು ಹರಿಕಂತ್ರ, ಮಹೇಂದ್ರ ಗುನಗಾ, ರಾಜೇಶ ತೆಂಡೂಲ್ಕರ್ ಇತರರು ವೇದಿಕೆಯಲ್ಲಿದ್ದರು. ಜಾನಪದ ಅಕಾಡಮಿಯ ನೂತನ ಸದಸ್ಯ ಪುರುಷೋತ್ತಮ ಗೌಡರನ್ನು ಸನ್ಮಾನಿಸಲಾಯಿತು.
ಮಂಜುನಾಥ ಕೆ ಮುದ್ಘೇಕರ್ ನಿರ್ವಹಿಸಿದರು. ಉದಯ ಡಿ ನಾಯ್ಕ ಸ್ವಾಗತಿಸಿದರು. ರಾಜೇಶ ಮಡಿವಾಳ ವಂದಿಸಿದರು.
Leave a Comment