ಅಗಷ್ಟ್ 15ರಂದು ಕುಡಿದ ಅಮಲಿನಲ್ಲಿ ಧ್ವಜಾರೋಣ ನೆರವೇರಿಸಿದ್ದ ಕುಮಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಮಾದೇಗೌಡನನ್ನು ಕಾಲೇಜು ಶಿಕ್ಷಣ ಮುಖ್ಯ ಆಡಳಿತಾಧಿಕಾರಿ, ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಧ್ವಜಾರೋಣದ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಪ್ರಭಾರ ಪ್ರಾಂಶುಪಾಲ ಅಸಂಬದ್ಧವಾಗಿ ವರ್ತಿಸಿದ ವೀಡಿಯೋ ಬಹಿರಂಗವಾಗಿತ್ತು. ಈ ಬಗ್ಗೆ ಕಾಲೇಜು ಶಿಕ್ಷಣ ಮುಖ್ಯ ಆಡಳಿತಾಧಿಕಾರಿ, ರಾಮಮದೇಗೌಡನಿಗೆ ನೋಟಿಸು ಜಾರಿ ಮಾಡಿದ್ದರು. ಈ ರೀತಿ ವರ್ತಿಸುವುದು ರಾಷ್ಟ್ರೀಯ ಗೌರವ ಅವಮಾವಿಸುವಿಕೆಯನ್ನು ತಡೆಗಟ್ಟುವ ಕಾಯಿದೆ 1971ರ ಪ್ರಕಾರ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಜವಾಬ್ದಾರಿಯು ಪ್ರಾಂಶುಪಾಲ ಹುದ್ದೆಯಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಹೊಂದಿದ್ದ ವ್ಯಕ್ತಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಪಾನಮತ್ತರಾಗಿ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ಸಲ್ಲಿಸಿದ್ದಾರೆ ಎಂದು ದೂರಲಾಗಿತ್ತು. ಈ ರೀತಿ ರಾಷ್ಟ್ರಧ್ವಜಕ್ಕೆ ದಕ್ಕೆ ತರುವ ರೀತಿಯಲ್ಲಿ ವರ್ತಿಸುವುದು ಕರ್ನಾಟಕ ನಾಗರಿಕ ಸೇವಾ ನಿಯಮ 1966 ನಿಯಮ 3(1)ರ (1),(2) ಮತ್ತು (3)ನ್ನು ಉಲ್ಲಂಘಿಸಿದಂತಾಗಿದ್ದು ಸೇವೆಯಿಂದ ಅಮಾನತ್ತುಗೊಳಿಸಲು ಆದೇಶಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ(ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಡಿ ಪ್ರದತ್ತವಾದ ಅಧಿಕಾರಿ ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತಿನಲ್ಲಿ ಇಡಲಾಗಿದೆ.
Leave a Comment