ಭಟ್ಕಳ:
ಗಣೇಶೋತ್ಸವ ಸಮಿತಿಯೊಂದು ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ತನ್ನ ಬೆಳ್ಳಿಹಬ್ಬ ವರ್ಷಾಚರಣೆಯಲ್ಲಿ ಸುಜ್ಞಾನ ನಿಧಿ ಸ್ಥಾಪಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.
ಅವರು ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆಳ್ಳಿಹಬ್ಬ ವರ್ಷಾಚರಣೆಯ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಟ್ಕಳ ಕ್ಷೇತ್ರದಲ್ಲಿ ಅನೇಕ ಪ್ರತಿಭೆಗಳಿದ್ದು ವಿದೇಶದಲ್ಲಿ ಕೂಡಾ ಓದನ್ನು ಮುಂದುವರಿಸಿದ್ದಾರೆ, ಐ.ಎ.ಎಸ್., ಐ.ಪಿ.ಎಸ್., ವೈದ್ಯಕೀಯ, ಇಂಜಿನಿಯರಿಂಗ್ ಓದುತ್ತಿರುವ ಅನೇಕರಿಗೆ ಸಹಕಾರ ಮಾಡಿದ್ದು ಯಾರೇ ಆದರೂ ವಿದ್ಯಾಭ್ಯಾಸಕ್ಕೆ ಕೊರತೆಯಾದರೆ ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.
ನಮ್ಮ ಕರಾವಳಿ ಭಾಗದಲ್ಲಿ ಇಂದಿಗೂ ಮಳೆ, ಬೆಳೆ ಚೆನ್ನಾಗಿದೆ ಎಂದರೆ ಅದಕ್ಕೆ ನಮ್ಮ ಧಾರ್ಮಿಕ ಆಚರಣೆಯೇ ಕಾರಣವಾಗಿದೆ. ಇಲ್ಲಿನ ನಾವು ಭಕ್ತಿಯಿಂದ ದೇವರನ್ನು ಪೂಜಿಸುತ್ತಿರುವುದು, ಗುರು ಹಿರಿಯರನ್ನು ಗೌರವಿಸುವುದು ಸೇರಿದಂತೆ ನಮ್ಮ ಜಿಲ್ಲೆಯಲ್ಲಿಯ ಅರಣ್ಯ ಸಂಪತ್ತನ್ನು ಉಳಿಸಿಕೊಂಡು ಬಂದಿರುವುದು ಕೂಡಾ ಈ ಭಾಗಕ್ಕೆ ವರದಾನವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷೆತೆ ವಹಿಸಿದ್ದ ಗೋವಾದ ಐ.ಎಫ್.ಎಸ್. ಅಧಿಕಾರಿ ದಾಮೋದರ ಎ.ಟಿ. ಮಾತನಾಡಿ ಸಂಘಟನೆ, ವಿದ್ಯೆಯಿಂದ ಅಭಿವೃದ್ಧಿಯನ್ನು ಸಾಧಿಸಬಹುದು. ಹಿಂದೆ ಸಂಘಟನೆಯನ್ನು ಮಾಡಿ ಆ ಮೂಲಕ ಸಂವಹನ ನಡೆಸಲು ಉದ್ದೇಶಿಸಿ ಗಣೇಶೋತ್ಸವಗಳನ್ನು ಬಾಲಗಂಗಾಧರ ತಿಲಕರು ಹುಟ್ಟು ಹಾಕಿದರು. ಅದು ಇಂದು ದೇಶದೆಲ್ಲೆಡೆಯಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲ್ಪಡುತ್ತಿದೆ. ನಮ್ಮ ದೇಶ ಯುವ ಜನರ ದೇಶವಾಗಿದೆ. ಪ್ರಪಂಚದ ಎಲ್ಲಾ ದೇಶಗಳೂ ಕೂಡಾ ನಮ್ಮ ಯುವ ಶಕ್ತಿಯೆಡೆಗೆ ದೃಷ್ಟಿ ಬೀರಿವೆ. ಯುವಕರು ಸಣ್ಣ ಸಣ್ಣ ಕಾರ್ಯಗಳನ್ನು ಮಾಡುತ್ತಾ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಂiiತ್ ಸದಸ್ಯ ಆಲ್ಬರ್ಟ ಡಿಕೋಸ್ತ, ನಾಮಧಾರಿ ಸಮಾಜದ ಪ್ರಮುಖರು, ತಾಲೂಕಾ ಪಂಚಾಂiiತ್ ಮಾಜಿ ಅಧ್ಯಕ್ಷರೂ ಆದ ಎಲ್. ಎಸ್. ನಾಯ್ಕ, ಗುತ್ತಿಗೆದಾರ ಸತೀಶ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಸಮಾಜ ಸೇವಕ ಅಣ್ಣಪ್ಪ ನಾಯ್ಕ, ಮಾತನಾಡಿದರು.
ವೇದಿಕೆಯಲ್ಲಿ ತಾ. ಪಂ. ಸದಸ್ಯೆ ಮೀನಾಕ್ಷಿ ನಾಯ್ಕ, ಗ್ರಾ.ಪಂ.ಅಧ್ಯಕ್ಷೆ ಅಮೀನಾ ಇಸ್ಮಾಯಿಲ್, ಉಪಾಧ್ಯಕ್ಷ ಗಣಪತಿ ನಾಯ್ಕ, ಸಮಾಜ ಸೇವಕ ಮಂಜು ನಾಯ್ಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ ನಾಯ್ಕ, ಎ.ಪಿ.ಎಂ.ಸಿ. ಅಧ್ಯಕ್ಷ ಗೋಪಾಲ ನಾಯ್ಕ, ಮೋಹನ ಎಸ್. ನಾಯ್ಕ, ಮಂಜುನಾಥ ಎ. ನಾಯ್ಕ, ಚೀಪಾ ಮಂಗಳ ಗೊಂಡ ಮುಂತಾದವರು ಉಪಸ್ಥಿತರಿದ್ದರು.
ಸಹನಾ ಸಂಗಡಿಗರು ಪ್ರಾರ್ಥಿಸಿದರು. ಸಮಿತಿಯ ಕಾರ್ಯದರ್ಶಿ ಕೃಷ್ಣಾ ನಾಯ್ಕ ಸ್ವಾಗತಿಸಿದರು. ರವೀಂದ್ರ ನಾಯ್ಕ ವರದಿ ವಾಚಿಸಿದರು. ನಾರಾಯಣ ನಾಯ್ಕ ವಂದಿಸಿದರು
Leave a Comment