ಕಾರವಾರ: ಮತದಾರರ ಪಟ್ಟಿಯಲ್ಲಿ ದಿಡೀರ್ ಆಗಿ ಹೆಸರು ಕಡಿತ ಮಾಡಿರುವದನ್ನು ವಿರೋಧಿಸಿ ಕಾರವಾರ-ಅಂಕೋಲಾ ಕ್ಷೇತ್ರದ ಗ್ರಾಮೀಣ ಭಾಗದ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು.
ಗ್ರಾಮೀಣ ಭಾಗದ ಸಾವಿರಾರು ಜನ ನಿತ್ಯ ಉದ್ಯೋಗ ಅರೆಸಿ ಗೋವಾ ಹಾಗೂ ಇನ್ನಿತರ ಪ್ರದೇಶಗಳಿಗೆ ತೆರಳುತ್ತಿದ್ದು, ಕೆಲಸಕ್ಕೆ ತೆರಳಿದ ವೇಳೆ ಆಗಮಿಸಿದ ಅಧಿಕಾರಿಗಳು ಮನೆ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು ನೀಡಿದ ವರದಿಯಲ್ಲಿ ಮತದಾರರು ಮನೆಯಲ್ಲಿ ವಾಸವಾಗಿಲ್ಲ ಎಂದು ನಮೂದಿಸಲಾಗಿದ್ದು, ಇದರಿಂದ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ಹೆಸರನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದೂರಿದರು. ತಾವೇಲ್ಲರೂ ಕಾರವಾರ ನಿವಾಸಿಯಾಗಿದ್ದು, ಮೂಲ ನಿವಾಸದಲ್ಲಿಯೇ ವಾಸವಾಗಿದ್ದೇವೆ. ಹೀಗಾಗಿ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಬಾರದು ಎಂದು ಆಗ್ರಹಿಸಿದರು.
Leave a Comment