ಹೊನ್ನಾವರ:
ತಾಲೂಕಿನ ನವಿಲಗೋಣ ಗ್ರಾ.ಪಂ. ವ್ಯಾಪ್ತಿಯ ಚಿಪ್ಪಿಹಕಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಮೇಲೆ ಸಮೀಪದ ಗುಡ್ಡದ ಮೇಲಿನ ಬೃಹತ್ ಗಾತ್ರದ ಬಂಡೆಗಲ್ಲು ಉರುಳಿ ಅಪ್ಪಳಿಸಿದ ಪರಿಣಾಮ ಶಾಲಾ ಕಟ್ಟಡ ಸಂಪೂರ್ಣ ಬಿರುಕು ಕಾಣಿಸಿಕೊಂಡಿದೆ.
ಚಿಪ್ಪಿಹಕ್ಕಲ ಗ್ರಾಮದ ಗುಡ್ಡದ ಅಂಚಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಗುಡ್ಡದ ತುತ್ತ ತುದಿಯಲ್ಲಿರುವ ಬೃಹತ್ ಗಾತ್ರದ ಬಂಡೆಗಲ್ಲು ಉರುಳಿ ಶಾಲೆಯ ಗೋಡೆಗೆ ಅಪ್ಪಳಿಸಿದೆ ಎಡೆಬಿಡದೇ ಸುರಿದ ಮಳೆಯಿಂದಾಗಿ ಗುಡ್ಡದ ಮೇಲೆ ತೇವಾಂಶ ಹೆಚ್ಚಾಗಿದ್ದರಿಂದ ಬಂಡೆಗಲ್ಲು ಒಮ್ಮೆಲೆ ಉರುಳಿ ಬಿದ್ದಿದೆ. ಶಾಲೆಯ ಕೊಠಡಿಯಲ್ಲಿ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ನಂತರ ಶಾಲಾ ವಿದ್ಯಾರ್ಥಿಗಳಿಗೆ ಬೇರೆ ಕೋಠಡಿಯಲ್ಲಿ ಪಾಠ ಮಾಡಲಾಗಿದ್ದು, ಸದ್ಯ ಕೊಠಡಿಯನ್ನು ಮುಚ್ಚಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊಠಡಿಯನ್ನು ಪ್ರವೇಶಿಸದಂತೆ ಮುನ್ಸೂಚನೆ ನೀಡಲಾಗಿದೆ.
Leave a Comment