ಕಾರವಾರ:
ಮರಣದ ನಂತರ ಅಂಗಾಂಗಗಳನ್ನು ದಾನ ನೀಡುವ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಬೈಕ್ನಲ್ಲಿ ಪ್ರವಾಸ ಕೈಗೊಂಡಿರುವ ಅಂಕಿತ ಶ್ರೀವಾತ್ಸವ ಮತ್ತು ತಂಡವನ್ನು ನಗರದಲ್ಲಿರುವ ಭಾರತೀಯ ಜೀವ ವಿಮಾ ನಿಗಮದ ಸಿಬ್ಬಂದಿ ಹಾಗೂ ಪ್ರತಿನಿಧಿಗಳು ಮತ್ಸ್ಯಾಗಾರದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಕಿತ ಶ್ರೀವಾತ್ಸವ, ಮನುಷ್ಯನು ತನ್ನ ಮರಣದ ನಂತರ ತನ್ನ 6 ಅಂಗಗಳನ್ನು ದಾನ ಮಾಡಬಹುದಾಗಿದೆ. ಭಾರತದಲ್ಲಿ ಅಂಗದಾನದ ಪ್ರಮಾನವು ಕೇವಲ ಶೇ.0.02ರಷ್ಟು ಮಾತ್ರ ಇದೆ. ಈ ನಿಟ್ಟಿನಲ್ಲಿ ಸಾರ್ವನಿಕರಲ್ಲಿ ಜಾಗೃತಿ ಮೂಡಿಸುವ ದ್ರಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಕೈಗೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪ್ರಭಾರಿ ಶಾಖಾಧಿಕಾರಿ ಉಲ್ಲಾಸ ಸಾಳುಂಕೆ, ಆಡಳಿತಾಧಿಕಾರಿ ಪಿ.ಕೆ.ನಾಯ್ಕ, ಎಚ್.ಕೆ.ನಾಯಕ ಮುಂತಾದವರು ಇದ್ದರು.
Leave a Comment