ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಮಹಾವಿದ್ಯಾಲಯಗಳ ಮಹಿಳೆಯರ ಏಕ ವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೆ.7 ಹಾಗೂ 8ರಂದು 2 ದಿನಗಳ ಕಾಲ ನಡೆಯಲಿದೆ.
7ರಂದು ಬೆಳಿಗ್ಗೆ 11-30ಕ್ಕೆ ಬೆಳಕು ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಉಪಸ್ಥಿತರಿರುವರು.
ಕವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಬಿ.ಎಂ.ಪಾಟೀಲ್,ಉದ್ಯಮಿ ಸುನೀಲ ನಾಯ್ಕ,ಎಂಪಿಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
8 ರಂದು ಸಂಜೆ 3-30ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಶಾಸಕ ಮಂಕಾಳ ಎಸ್.ವೈದ್ಯ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೃಷ್ಣ ಗೌಡ ಭಾಗವಹಿಸುವರು’ ಎಂದು ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಪ್ರೊ.ಆರ್.ಕೆ.ಮೇಸ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment