ಕಾರವಾರ:
ಮೈಸೂರಿನ ನ್ಯಾಶನಲ್ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್.ಐ.ಇ) ಸಂಸ್ಥೆಯ ವಿದ್ಯಾರ್ಥಿಯಾಗಿರುವ ಕಾರವಾರ ಮೂಲದ ಸಿದ್ದಾರ್ಥ ಸುಹಾಸ್ ರೇವಣಕರ್ ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ (ಎಂ.ಟೆಕ್) ಪ್ರಥಮ ರ್ಯಾಂಕ್ ಪಡೆದು ಸುವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರೋಡಕ್ಷನ್ ಇಂಜಿನಿಯರಿಂಗ್ ಎಂಡ್ ಸಿಸ್ಟಮ್ ಟೆಕ್ನಾಲಜಿಯಲ್ಲಿ ಜರುಗಿದ ಸ್ನಾತಕೋತರ ಪರೀಕ್ಷೆಯಲ್ಲಿ 9.60 ಸಿಜೆಪಿಎ ಗಳಿಸಿರುವ ಇವರು ಡೆಸ್ಟಿಂಕ್ಷನ್ನೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುವದಕ್ಕೆ ಪುರಸ್ಕಾರ ನೀಡಲಾಗಿದೆ. ಕಾಲೇಜು ಘಟಿಕೋತ್ಸವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ ನಿರ್ದೇಶಕ ಅನುರಾಗ ಕುಮಾರ್ ಅವರು ಸಿದ್ದಾರ್ಥ ಸುಹಾಸ್ ರೇವಣಕರ್ಗೆ ಪ್ರಮಾಣಪತ್ರ ಹಾಗೂ ಸುವರ್ಣ ಪದಕ ಪ್ರದಾನ ಮಾಡಿದರು. ಸಿದ್ದಾರ್ಥ ಸುಹಾಸ್ ರೇವಣಕರ್ ಕಾರವಾರದ ಕಡವಾಡದವರಾಗಿದ್ದು, ಉಜರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದರು
Leave a Comment