ಕಾರವಾರ: ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು.
ಅಮದಳ್ಳಿಯಲ್ಲಿ ಮುದಗಾದ ನೇತಾಜಿ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಡೆದ ಯಕ್ಷಗಾನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕøತಿಯನ್ನು ಪರಿಚಯಿಸುವ ಹಾಗೂ ಬೆಳೆಸುವ ಅಪರೂಪದ ಕಲೆ ಯಕ್ಷಗಾನಕ್ಕಿದೆ. ಬೇರೆ ಯಾವ ಕಲಾ ಪ್ರಕಾರವೂ ಯಕ್ಷಗಾನಕ್ಕೆ ಸರಿಸಮವಾಗಿಲ್ಲ ಎಂದು ಅವರು ಹೇಳಿದರು. ತೋಡೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡ ಕೇರಂ ಪಂದ್ಯಾವಳಿಯ ವಿಜೇತರಿಗೆ ಇದೇ ವೇದಿಕೆಯಲ್ಲಿ ಬಹುಮಾನ ನೀಡಲಾಯಿತು. ಅಮದಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ದೇವಾನಂದ ಚೆಂಡೇಕರ, ಶ್ರೀಧರ ತಳೇಕರ, ಶಶಿಕಾಂತ ನಾಯ್ಕ ರಂಗಶ್ರೀ ಯಕ್ಷಗಾನ ಮಂಡಳಿ ಅಧ್ಯಕ್ಷ ಉದಯ ನಾಯ್ಕ, ಮುದಗಾದ ನೇತಾಜಿ ಯುವಕ ಮಂಡಳದ ಸಂಸ್ಥಾಪಕ ಅಧ್ಯಕ್ಷ ತೋಕು ಹರಿಕಂತ್ರ ಇದ್ದರು. ಜಾನಪದ ಅಕಾಡೆಮಿ ಸದಸ್ಯ ಪುರುಷೋತ್ತಮ ಗೌಡರನ್ನು ಗೌರವಿಸಲಾಯಿತು. ರಂಗಶ್ರೀ ಯಕ್ಷ ಪ್ರಶಸ್ತಿಯನ್ನು ಗಣೇಶ ಜಾಲಾ ಗೌಡರಿಗೆ ನೀಡಲಾಯಿತು. ರಾಜೇಶ ಮಡಿವಾಳ ನಿರ್ವಹಿಸಿದರು.
Leave a Comment