ಹೊನ್ನಾವರ :
ಹೊನ್ನಾವರದ ಸುತ್ತಮುತ್ತಲ ಜನ ಅನಾವಶ್ಯಕವಾಗಿ ಬೆದರಬೇಕಾಗಿ ಬಂದಿರುವುದು a,rto ಆಫಿಸಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ!! ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕರಾವಳಿ ಭಾಗದಲ್ಲಿ ಕಾರವಾರ ಮುಖ್ಯ ಕಚೇರಿಗೆ ಸಂಬಂಧಿಸಿ a,rto ಉಪಕಛೇರಿ ಹೊನ್ನಾವರದಲ್ಲಿ ಸ್ಥಾಪಿಸಲಾಯಿತು. ಆದರೆ ಇದರಿಂದ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ.
a,rto ಸಿಬ್ಬಂದಿ ಅಧಿಕಾರಿಗಳು ರಸ್ತೆಯ ಮಧ್ಯೆ ನಿಂತು ದ್ವಿಚಕ್ರ, ಕಾರು ಹಾಗೂ ಲಾರಿಯವರಿಗೆ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರವಾಸರಿಗೆ ಬೆದರಿಸುವುದೇ ಉದ್ಯೋಗ ಮಾಡಿಕೊಂಡಿದ್ದಾರೆ. ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಇವರ ‘ಡ್ಯೂಟಿ’ ಆಗಿ ಬಿಟ್ಟಿದೆ.
ಇಂದು (14-09-2017) ಕಾರು ಒಂದನ್ನು ನಿಲ್ಲಿಸಿ ವಶಪಡಿಸಿಕೊಂಡ ಂಖಖಿಔ ಮತ್ತು ಸಿಬ್ಬಂದಿಗಳು ಅಪ್ಪಟ ರೌಡಿಗಳಂತೆ ವರ್ತಿಸಿದ್ದಾರೆ. ಅನಾರೋಗ್ಯ ಪೀಡಿತರೊಬ್ಬರಿಗೆ ಔಷಧ ತರಲು ತೆರಳಿದ್ದ ಕಾರಿನಲ್ಲಿದ್ದವರ ಮೊಬೈಲ್, ಹಣದ ಪರ್ಸನ್ನು ಹಾಗೂ ಇತ್ಯಾದಿಗಳನ್ನು ಕಸಿದುಕೊಂಡು ಹಣದ ಪರ್ಸನ್ನು ಜಾಲಾಡಿದ್ದಾರೆ. ಅಂಥಹ ಅಧಿಕಾರ ಇವರಿಗೆ ಯಾರು ಕೊಟ್ಟರು?
a,rto ಎಜಂಟರ ಮೂಲಕ ಲೈಸನ್ಸ್ ಕೊಡಿಸುವುದು ಇಲ್ಲಿ ಸಾಮಾನ್ಯ ದೃಷ್ಯ. ಏಜೆಂಟ್ ಹಾಗೂ a,rto ನಡುವಿನ ಅನೈತಿಕ ಒಳೊಪ್ಪದಿಂದ ಗ್ರಾಹಕರು ಪರದಾಡಬೇಕಾಗಿದೆ. ಯಾರೇ ಬಂದರು ಇಲ್ಲದ ನೆಪ ಹೇಳಿ ಸ್ಮಾರ್ಟ ಕಾರ್ಡ ಲೈಸನ್ಸ್ ನೀಡದಿರುವುದು, ಒಂದು ವಾರ ಬಿಟ್ಟು ಬರಲು ಹೇಳುವುದು ನಂತರ ಕಳೆದು ಹೋಗಿದೆ ಎಂದು ಹಲ್ಲು ಗಿಂಜುತ್ತಾ ನಿಲ್ಲುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಹೊನ್ನಾವರ a,rto ಕಚೇರಿ ದರೋಡೆಕೋರರ ಅಡ್ಡೆಯಂತಾಗಿ ಬಿಟ್ಟಿದೆ.
ಅಧಿಕಾರಿಗಳೆನ್ನುವವರು ಕೇವಲ ಖಾಕಿ ಪ್ಯಾಂಟ್ ಹಾಕಿಕೊಂಡು ಒಬ್ಬ ಪಿ.ಸಿ. ಯನ್ನು ಇಟ್ಟುಕೊಂಡು ಗುಂಡಾಗಿರಿ ನಡೆಸುತ್ತಾರೆಂದು ಗ್ರಾಹಕರು ಹೇಳುತ್ತಾರೆ. ಅಧಿಕಾರಿಗಳು ಎಂದೂ ಯುನಿಫಾರ್ಮ ಹಾಕುವುದೇ ಇಲ್ಲ. ನಾವು ಅವರನ್ನು ಗುರುತಿಸುವುದು ಹೇಗೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಇಂಥಹ ಕಚೇರಿಯೊಂದರ ಅಗತ್ಯವಿದೆಯೇ?
ಹೊನ್ನಾವರ ಸುತ್ತ-ಮುತ್ತ ವಾಹನಗಳ ದುರ್ಘಟನೆ ನಡೆಯುವುದಕ್ಕೂ ಇವರು ನಿರ್ಲಕ್ಷ್ಯದಿಂದ ನೀಡುತ್ತಿರುವ ಲೈಸನ್ಸ್ಗೂ ಸಂಬಂಧವಿದೆ ಎಂದು ಜನ ಆಡಿಕೊಳ್ಳುತ್ತಾರೆ.
Leave a Comment