ಕಾರವಾರ:
ಮಾಲಾದೇವಿ ಮೈದಾನದಲ್ಲಿ ನಡೆದ ಪ್ರೋ ಕಬ್ಬಡಿಯ ಅಂತಿಮ ಪಂದ್ಯದಲ್ಲಿ ಬೋರಕರ್ ವಾರಿಯರ್ಸ್ ಕಾಮತ್ ಪ್ಲಸ್ ವಿರುದ್ಧ ರೋಚಕ ಜಯಗಳಿಸಿದೆ.
ಜಿಲ್ಲಾ ಮಟ್ಟದ ಪರೋ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬೋರಕರ್ ವಾರಿಯರ್ಸ್ ತಂಡ ಕಾಮತ್ ಪ್ಲಸ್ ವಿರುದ್ಧ 30-24 ಅಂಕಗಳನ್ನು ಪಡೆದು 6 ಅಂಕಗಳ ಅಂತರದಲ್ಲಿ ಬೋರಕರ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು. ಈ ಎರಡು ತಂಡಗಳ ನಡುವ ನಡೆದ ಎರಡು ಸುತ್ತಿನ ಪಂದ್ಯಾವಳಿ ರೋಚಕ ತಿರುವುಗಳನ್ನು ಪಡೆದಿತ್ತು. ಸೆಮಿ ಪೈನಲ್ ಪಂದ್ಯದಲ್ಲಿ ಮೊದಲು ಕಾಮತ್ ಪ್ಲಸ್ ಹಾಗೂ ಸಾಕ್ಷಿತ್ ಹಾರ್ಡ್ವೆರ್ ನಡುವೆ ಪೈಪೋಟಿ ನಡೆದು 35-27 ಅಂಕಗಳನ್ನು ಪಡೆದು ಕಾಮತ್ ಪ್ಲಸ್ ತಂದ 8 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಅದರಂತೆ ಬೋರಕರ್ ವಾರಿಯಸ್ಸ್ ಹಾಗೂ ಶೆಜ್ಜೇಶ್ವರ್ ಡಿವೋಟಿಸ್ ನಡುವೆ ಗೆಲುವಿಗೆ ಕಾದಾಟ ನಡೆದು 29-27 ಅಂಕಗಳನ್ನು ಪಡೆದು ಕೇವಲ 2 ಅಂಕಗಳ ಅಂತರದಲ್ಲಿ ಶೆಜ್ಜೇಶ್ವರ ಡಿವೋಟಿಸ್ ತಂಡ ಸೋಲು ಅನುಭವಿಸಬೇಕಾಯಿತು. ಸೆಮಿಪೈನಲ್ ಪಂದ್ಯವು ಸಹ ಸಾಕಷ್ಟು ಕುತೂಹಲ ಏರ್ಪಟ್ಟಿತ್ತು.
ಕೊನೆಗೆ ಮೂರನೇ ಸ್ಥಾನಕ್ಕಾಗಿ ಸಾಕ್ಷಿತ್ ಹಾರ್ಡ್ವೇರ್ ಹಾಗೂ ಶೆಜ್ಜೇಶ್ವರ್ ಡಿವೋಟಿಸ್ ತಂಡಗಳ ನಡುವೆ ತೀವ್ರ ಪೈಪೋಟೊ ನಡೆದು ಮೂರನೇ ಸ್ಥಾವನ್ನು ಸಾಕ್ಷಿತ್ ಹಾರ್ಡ್ವೇರ್ ತಂಡ ಮೂರನೇ ಸ್ಥಾನ ಹಾಗೂ ಶೆಜ್ಜೇಶ್ವರ್ ಡಿವೋಟಿಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.
ಬೋರಕರ್ ವಾರಿಯರ್ಸ್ ಹಾಗೂ ಕಾಮತ್ ಪ್ಲಸ್ ನಡುವೆ ಪೈನಲ್ ಪಂದ್ಯಾವಳಿಯ ಅಂತಿಮ ಘಟ್ಟ ತಲುಪುತ್ತಿದ್ದಂತೆ ನಿರ್ಣಾಯಕರ ನಿರ್ಣಯಕ್ಕೆ ಬೋರಕರ್ ವಾರಿಯರ್ಸ್ ತಂಡ ಕಾಮತ್ ಪ್ಲಸ್ ತಂಡದ ಕೋಚ್ ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪುತ್ತಿದ್ದಂತೆ ಎರಡು ತಂಡದ ಪ್ರಾಯೋಜಕರು ಹಾಗೂ ಶಾಸಕ ಸತೀಶ್ ಸೈಲ್ ಮದ್ಯಸ್ಥಿಕೆ ವಹಿಸಿದರು. ಈ ನಡುವೆ ಸುಮಾರು 20 ನಿಮಿಷಗಳ ಕಾಲ ಪಂದ್ಯಾವಳಿಗೆ ತಡೆ ಉಂಟಾಗಿತ್ತು. ಬಳಿಕ ನಿರ್ಣಾಯಕರ ನಿರ್ಧಾರವೇ ಅಂತಿಮ ಎಂದು ನಿರ್ಧರಿಸಿ ಪಂದ್ಯಾವಳಿ ಮುಂದುವರಿಸಲಾಯಿತು.
Leave a Comment