ಕಾರವಾರ: ಆರ್ಟ ಆಫ್ ಲಿವಿಂಗ್ ವತಿಯಿಂದ ಬುಧವಾರ ಸಂಜೆ ಇಲ್ಲಿನ ರಾಘವೇಂದ್ರ ಮಠದಲ್ಲಿ ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ ನಡೆಯಿತು.
ವೇದ ವಿಜ್ಞಾನ ಮಹಾ ವಿದ್ಯಾಪೀಠದ ಸ್ವಾಮಿ ಸೂರ್ಯಪಾದ ಭಜನೆ ಹಾಗೂ ದ್ಯಾನ ನಡೆಸಿಕೊಟ್ಟರು. ಗುರುಪ್ರಸಾದ ದ್ವನಿ ಗೂಡಿಸಿದರು. ಶ್ರೀವತ್ಸ ಭಟ್ಟ ತಬಲಾ ಸಾಥ್ ನೀಡಿದರು. ಡಾ. ಶೃತಿ ಅನೂಪ, ಕಾವ್ಯ, ಸುನಿಲಚಂದ್ರ ಹಾರ್ವೆ ಗಾಯನ ಪ್ರಸ್ತುತ ಪಡಿಸಿದರು. ಚಂದ್ರಶೇಖರ್ ರಾವ್ ಗುರು ವಂದನೆ ಮಾಡಿದರು. ಗಣೇಶ್ ಆಚಾರ್ಯ ಇತರರು ಸಂಘಟಿಸಿದ್ದರು. ರಾಘವೇಂದ್ರ ಆಚಾರ್ಯ ವಂದಿಸಿದರು.
Leave a Comment