ಕಾರವಾರ: ಕಳೆದ ಆರು ತಿಂಗಳಿನಿಂದ ವಕ್ಟ್ ಸಮಿತಿ ಸಭೆ ನಡೆಯದಿರುವದಕ್ಕೆ ಅಸಮಧಾನಗೊಂಡಿರುವ ಉತ್ತರ ಕನ್ನಡ ಜಿಲ್ಲಾ ವಕ್ಟ ಸಲಹಾ ಸಮಿತಿ ಸದಸ್ಯ ನಜೀರ ಅಹಮದ್ ಯು ಶೇಖ್ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಜಿಲ್ಲಾ ವಕ್ಛ ಕಛೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವ ಬಗ್ಗೆ ಹಾಗೂ ವಕ್ಛ ಅಧಿಕಾರಿ ಎಂ.ಎಂ. ಸವಣೂರುರನ್ನು ಬದಲಿಸುವ ಕುರಿತು ಈ ಹಿಂದೆ ಪತ್ರ ಬರೆದಿದ್ದು, ಅದಕ್ಕೆ ತಮ್ಮಿಂದ ಯಾವದೇ ಪ್ರತ್ಯುತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮಿರ್ಜಾನ್ನಲ್ಲಿ ನಡೆದ ಸಭೆಯೇ ಕೊನೆಯದಾಗಿದ್ದು, ನಂತರ ವಕ್ಟ್ ಸಮಿತಿ ಸಭೆ ನಡೆದಿಲ್ಲ. ಇದರಿಂದ ಜನರ ಸಮಸ್ಯೆಗಳನ್ನು ಬಗೆಹರಿಸುವದು ಕಷ್ಟವಾಗುತ್ತಿದೆ. ಕೂಡಲೇ ಪ್ರತಿಕ್ರಿಯಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Leave a Comment