ಹೊನ್ನಾವರ ,ಕೇಂದ್ರ ಸರಕಾರವು ದೀನ ದಯಾಳ್ ಉಪಾಧ್ಯಾಂiÀi ವಿದ್ಯುದೀಕರಣ ಯೋಜನೆಯಡಿ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ತರ ಕಾರ್ಯವನ್ನು ಘೋಷಿಸಿದೆ. ಇದಕ್ಕೆ ಪೂರಕವಾಗಿ ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದು ಪ್ರಥಮವಾಗಿ ಹೊನ್ನಾವರಪಟ್ಟಣದ ತುಳಸಿ ನಗರದ ಬಡ ಕುಟುಂಬವಾದ ಗಣೇಶ ಮೇಸ್ತಾ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಪೂರ್ಣ ವೆಚ್ಚ ಭರಿಸಿ ಈ ಬಡವನ ಮನೆ ಬೆಳಗುವಂತೆ ಮಾಡಿ ಕೇಂದ್ರದ ವಿದ್ಯುದೀಕರಣ ಯೋಜನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮುನ್ನುಡಿ ಬರೆದಿದೆ. ಇದುವರೆಗೂ ವಿದ್ಯುತ್ ಸಂಪರ್ಕ ಕಾಣದ ಈ ಕುಟುಂಬ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕೈಯಿಂದಲೇ ಲೈಟ್ ಆನ್ ಮಾಡಿಸಿ ತಮ್ಮ ಸಂತಸ ವ್ಯಕ್ತಪಡಿಸುತ್ತಾ ಅವರಿಗೆ ಧನ್ಯವಾದ ತಿಳಿಸಿದರು.
ಅಲ್ಲದೇ ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೋರ್ವರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ವಿತರಿಸುವುದರೊಂದಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಲೈಟರನ್ನು ಸಹ ವಿತರಿಸಿ ಅನೂಕೂಲತೆ ಒದಗಿಸಿದರು.
ಹೀಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕೇಂದ್ರದ ಹಲವು ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿ ಫಲಾನುಭವಿಗಳು ಹಣ, ಸಮಯ ವ್ಯಯಿಸದೆ ಸುಲಭವಾಗಿ ಯೋಜನೆಯ ಒದಗಿಸುವಂತೆ ಮಾಡುತ್ತಿದ್ದು, ಇದೀಗ ಕೇಂದ್ರದ ಸರಕಾರದ ವಿದ್ಯುದೀಕರಣ ಯೋಜನೆಯನ್ನು ಕೂಡ ಟ್ರಸ್ಟ್ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಪ್ರಥಮವಾಗಿ ತಮ್ಮ ಟ್ರಸ್ಟ್ ವತಿಯಿಂದ ಸಂಪೂರ್ಣ ಖರ್ಚು ಭರಿಸಿ ಓರ್ವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಸಿ ಜನತೆಯ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಉಮೇಶ ಮೇಸ್ತ, ವಿನಾಯಕ ಆಚಾರಿ, ನಾಗರಾಜ ಮೇಸ್ತ, ಮಹಾದೇವ ಮೇಸ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Comment